ಮೇದಿನಡ್ಕ ಅಂಗನವಾಡಿ ಕೇಂದ್ರದ ಆವರಣ ಕಾಂಪೌಂಡ್ ರಚನೆಗೆ ಗುದ್ದಲಿ ಪೂಜೆ

Share the Article

ಅಜ್ಜಾವರ, ಮೇದಿನಡ್ಕ ಅಂಗನವಾಡಿ ಕೇಂದ್ರದ ನೂತನ ಕಾಂಪೌಂಡ್ ರಚನೆಗೆ ಜಿಲ್ಲಾ ಪಂಚಾಯತ್ ನಿಂದ 2.50 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು,ಈ ಯೋಜನೆಯ ಗುದ್ದಲಿ ಪೂಜೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿಸತ್ಯವತಿ ಬಸವನಪಾದೆ ನೆರವೇರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರವಿರಾಜ್ ಕರ್ಲಪಾಡಿ, ಶ್ರೀಮತಿ ದಿವ್ಯ ಪಡ್ಡಂಬೈಲು, ಕಾಮಗಾರಿ ಗುತ್ತಿಗೆದಾರರಾದ ಶ್ರೀ ಸುಬೋದ್ ಶೆಟ್ಟಿ ಮೇನಾಲ ,ಸ್ಥಳೀಯರಾದ , ದಯಾಳ್ ಮೇದಿನಡ್ಕ, ರಮೇಶ್ ಮೇದಿನಡ್ಕ, ಕಂದಯ್ಯ, ಅಜೀತ್, ಮುತ್ತುಕುಮಾರ , ಪ್ರಜ್ವಲ್ ಅಂಗನವಾಡಿ ಸಹಾಯಕಿ ಶ್ರೀಮತಿ ಕವಿತಾ ಮೇದಿನಡ್ಕ, ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಸುಬೋಧ್ ಶೆಟ್ಟಿ ಮೇನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಸಹ ಅರ್ಚಕ ರಾಘವ ಪೂಜಾ ಕೈಂಕರ್ಯ ನೆರವೇರಿಸಿದರು .

ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ ಮೇದಿನಡ್ಕ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

Leave A Reply