ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ತುಟ್ಟಿಭತ್ಯೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಿ ನೌಕರರಿಗೆ ಇದೀಗ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇಷ್ಟು ದಿನ ಭತ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದ ನೌಕರರಿಗೆ ನಿಟ್ಟುಸಿರು ಬಿಡುವಂತಾಗಿದೆ. ನೌಕರರಿಗೆ ಈಗಾಗಲೇ ಅವರ ಬ್ಯಾಂಕ್‌ ಅಕೌಂಟ್‌ಗಳಿಗೆ ಶೇ. 28ರಷ್ಟು ಭತ್ಯೆ ಬರಲಾರಂಭಿಸಿದೆ. ಆದರೂ, ನೌಕರರು ಒಂದು ವಿಚಾರದಲ್ಲಿ ನಿರಾಶೆಯಾಗಿದ್ದಾರೆ. ಅದೇನೆಂದರೆ, ನೌಕರರ 18 ತಿಂಗಳ ಬಾಕಿಗೆ ಸಂಬಂಧಿಸಿದಂತೆ ಅವರ ನಿರೀಕ್ಷೆಗಳನ್ನು ಈಡೇರಿಸಲಾಗಿಲ್ಲ.

ಯಾಕೆಂದರೆ ಸರ್ಕಾರ ತುಟ್ಟಿ ಭತ್ಯೆ (Dearness Allowance- DA) ಘೋಷಣೆ ಮಾಡಿದಾಗ, ಕೇವಲ ವರ್ಧಿತ ಡಿಎಯನ್ನು ಮಾತ್ರ ಪಡೆಯುತ್ತಾರೆ ಎಂದು ಹೇಳಲಾಗಿತ್ತು, ಹಾಗೂ, ಬಾಕಿ ಹಣವನ್ನು ನಿರಾಕರಿಸಲಾಗಿತ್ತು. ಆದರೂ, 18 ತಿಂಗಳ ಬಾಕಿ ಇರುವ ವಿಚಾರ ಈಗ ಪ್ರಧಾನಿ ಮೋದಿ ಅಂಗಳಕ್ಕೆ ತಲುಪಿದ್ದು, ಅವರು ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ತಮಗೆ ಬಾಕಿ ಸಿಗುವ ಭರವಸೆ ಬಗ್ಗೆ ಕೇಂದ್ರ ಸರ್ಕಾರದ ಸಿಬ್ಬಂದಿಯ ಡಿಎ(DA) ಬಾಕಿಯ ಆಶಯಗಳು ಮತ್ತೆ ಚಿಗುರೊಡೆದಿದೆ.

ಪ್ರಧಾನಿ ಮೋದಿ 18 ತಿಂಗಳ ಬಾಕಿಯನ್ನು ಅನುಮೋದಿಸಿದರೆ, ಕೇಂದ್ರ ಸರ್ಕಾರದ ಸುಮಾರು 1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಈಗ ಶೇ. 28ಕ್ಕೆ ದ್ವಿಗುಣಗೊಳಿಸಲಾಗಿದೆ. ಇದು 48 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ನಿವೃತ್ತರ ಮೇಲೆ ಪರಿಣಾಮ ಬೀರುತ್ತದೆ.

ಕೇಂದ್ರಕ್ಕೆ ಬಿಎಂಎಸ್​ ಮನವಿ

ಭಾರತೀಯ ಪಿಂಚಣಿದಾರರ ವೇದಿಕೆ (BMS) ಡಿಎ ಮತ್ತು ಡಿಆರ್ ಬಾಕಿ ಪಾವತಿಗಾಗಿ ವಿನಂತಿಸಿದ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು BMS ಮನವಿ ಮಾಡಿದ್ದು, ಜನವರಿ 1, 2020 ಮತ್ತು ಜೂನ್ 30, 2021 ರ ನಡುವೆ ತಡೆಹಿಡಿಯಲಾದ ಡಿಎ/ಡಿಆರ್ ಬಾಕಿಗಳನ್ನು ಆದಷ್ಟು ಬೇಗ ಪಾವತಿಸಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೇಳಿಕೊಂಡಿದೆ.

ಡಿಎ/ಡಿಆರ್ ಅಮಾನತುಗೊಳಿಸಿದ ನಂತರ, ಚಿಲ್ಲರೆ ಹಣದುಬ್ಬರವು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್, ಖಾದ್ಯ ತೈಲ ಮತ್ತು ದ್ವಿದಳ ಧಾನ್ಯಗಳ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಪಿಂಚಣಿದಾರರು ದೂರಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಹಣಕಾಸು ಸಚಿವಾಲಯವು ಡಿಎ ಹೆಚ್ಚಳವನ್ನು ಮೇ 2020 ರಿಂದ ಜೂನ್ 30, 2021 ಕ್ಕೆ ಮುಂದೂಡಿತ್ತು. ನಂತರ ಜುಲೈ .1, 2021 ರಂದು ಮರು ಪರಿಚಯಿಸಲಾಯಿತು. ಅಂದಿನಿಂದ ಮೂರು ಕಂತುಗಳ ಭತ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಜನವರಿ 2020, ಜುಲೈ 2020 ಮತ್ತು ಜನವರಿ 2021ರ ತಿಂಗಳುಗಳಿಗೆ ಒಟ್ಟು 11% ಡಿಎ ನೀಡಲಾಗಿದೆ. ಈ 18 ತಿಂಗಳುಗಳವರೆಗೆ, ಯಾವುದೇ ಭತ್ಯೆಯ ಬಾಕಿ ಪಾವತಿಸಲಾಗಿಲ್ಲ. ಮಳೆಗಾಲದ ಅಧಿವೇಶನದಲ್ಲಿ, ರಾಜ್ಯ ಹಣಕಾಸು ಸಚಿವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಘೋಷಣೆಯಲ್ಲಿ ಬಾಕಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ವಿವರಿಸಿದರು.

ಉದ್ಯೋಗಿಗಳು ಮತ್ತು ನಿವೃತ್ತರು ಹೆಚ್ಚುತ್ತಿರುವ ಜೀವನ ವೆಚ್ಚಗಳಿಗೆ ಡಿಎ/ಡಿಆರ್ ಅನ್ನು ಒಂದು ರೀತಿಯ ಪರಿಹಾರವಾಗಿ ಪಡೆಯುತ್ತಾರೆ. ಕಳೆದ 18 ತಿಂಗಳುಗಳಲ್ಲಿ, ಹಲವು ವಸ್ತುಗಳ ಬೆಲೆ ಏರಿಕೆಗೆ ಹೆಚ್ಚು ವೇಗ ಪಡೆದುಕೊಂಡಿದೆ. ಈ ಹಿನ್ನೆಲೆ ಈ ಅವಧಿಯಲ್ಲಿ ಹಣವನ್ನು ತಡೆಹಿಡಿಯುವುದು ಈ ಪರಿಸ್ಥಿತಿಯಲ್ಲಿ ಉದ್ಯೋಗಿಗಳು ಮತ್ತು ನಿವೃತ್ತರ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.

ಪತ್ರದ ಪ್ರಕಾರ ಪಿಂಚಣಿದಾರರಲ್ಲಿ ಹೆಚ್ಚಿನವರು ವಯಸ್ಸಾದವರು. ಔಷಧಗಳು ದುಬಾರಿಯಾಗಿದ್ದು, ಇದಲ್ಲದೆ, ಕೋವಿಡ್ -19 ಪರಿಸ್ಥಿತಿಯ ಪರಿಣಾಮವಾಗಿ ಹೆಚ್ಚಿನ ಪಿಂಚಣಿದಾರರ ಆದಾಯವು ತುಂಬಾ ಕಡಿಮೆಯಾಗಿದ್ದು, ತಮ್ಮ ಹೊಟ್ಟೆಗೆ ಮಾತ್ರ ಆಹಾರ ನೀಡಬಹುದು ಎಂದು ಅವಲತ್ತು ತೋಡಿಕೊಂಡಿದ್ದಾರೆ.

ದೇಶವು ನಿಸ್ಸಂದೇಹವಾಗಿ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಬಹುಪಾಲು ನಿವೃತ್ತರು ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಹಾರ ನಿಧಿಗೆ (PM CARES) ಒಂದು ದಿನದ ಕೊಡುಗೆ ನೀಡಿದ್ದಾರೆ. ಅವರಿಗೆ ನೆರವು ಬೇಕಾದರೆ, ಸರ್ಕಾರವು ‘ಡಿಎ/ಡಿಆರ್’ ಪಾವತಿಸಬೇಕು ಎಂದೂ ಭಾರತೀಯ ಪಿಂಚಣಿದಾರರ ವೇದಿಕೆ (BMS) ಮನವಿ ಮಾಡಿದೆ.

Leave A Reply

Your email address will not be published.