ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ | ಅಷ್ಟಕ್ಕೂ ತೀರ್ಪಿನಲ್ಲೇನಿದೆ ??
ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಎಲ್ಲಾ ಸರ್ಕಾರಿ ಹುದ್ದೆಗಳಿಗೆ, ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಯು ಒಂದು ರಿಯಾಯಿತಿಯಾಗಿದೆ ಮತ್ತು ಅದು ಹಕ್ಕಲ್ಲ , ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.
ಸಂವಿಧಾನದ ಪರಿಚ್ಛೇದ 14 ಮತ್ತು 16 ರ ಅಡಿಯಲ್ಲಿ ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಆದರೆ, ಮಾನದಂಡಗಳ ಕುರಿತು ಅಪವಾದ ಇರಬಹುದು ಎಂದು ನ್ಯಾಯಾಲಯ ಹೇಳಿದೆ.
ಎಲ್ಲರಿಗೂ ಸಮಾನ ಅವಕಾಶ ನೀಡಿ:
‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ತೀರ್ಪು ಪ್ರಕಟಿಸಿರುವ ನ್ಯಾಯ ಪೀಠ, ‘ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಕ್ರಮದಲ್ಲಿ, ಈ ಮೊದಲು ನಿರ್ಧರಿಸಲಾಗಿರುವ ಕಾನೂನಿನ ಪ್ರಕಾರ ಎಲ್ಲ ಅಭ್ಯರ್ಥಿಗಳಿಗೆ ಸಮನಾದ ಅವಕಾಶ ಸಿಗಬೇಕು. ಆದರೆ, ಓರ್ವ ಮೃತ ವ್ಯಕ್ತಿಯ ಆಶ್ರಿತರಿಗೆ ಅನುಕಂಪದ ಆಧಾರದ ಮೇಲೆ ನಿಯುಕ್ತಿಯ ಪ್ರಸ್ತುತಿ ಆಯಾ ಮಾನದಂಡಗಳಲ್ಲಿ ಅಪವಾದ ಹೊಂದಿರಲಿದೆ. ಹೀಗಿರುವಾಗ ಅನುಕಂಪದ ಆಧಾರದ ಮೇಲಿನ ನಿಯುಕ್ತಿ ಕೇವಲ ಒಂದು ರಿಯಾಯ್ತಿಯಾಗಿದೆ ಮತ್ತು ಅದು ಹಕ್ಕಲ್ಲ’ ಎಂದು ಸ್ಪಷ್ಟಪಡಿಸಿದೆ.
ಪ್ರಕರಣ ಏನು?
ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ, ಯುಪಿ ಸರ್ಕಾರದ ಮನವಿಯನ್ನು ಅಂಗೀಕರಿಸಿರುವ ಪೀಠವು ಅಲಹಾಬಾದ್ ಹೈಕೋರ್ಟ್ಪೀಠದ ಆದೇಶವನ್ನು ಬದಿಗೊತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಗ್ರೇಡ್ -3 ಸೇವೆಯಲ್ಲಿ ಸಹಾನುಭೂತಿಯ ಆಧಾರದ ಮೇಲೆ ಮಹಿಳಾ ಅಭ್ಯರ್ಥಿಯೋಬ್ಬರಿಗೆ ಪರಿಗಣಿಸಿದ್ದನ್ನು ಪುನರ್ಪರಿಶೀಲಿಸಲು ಆದೇಶ ನೀಡಲಾಗಿತ್ತು.
ಈ ವೇಳೆ ಸರ್ವೋಚ್ಛ ನ್ಯಾಯಾಲಯ, ಏಕ ನ್ಯಾಯಾಧೀಶ ಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಈ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತ್ತು. ಗ್ರೇಡ್- IV ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ತೀರಿಕೊಂಡಿದ್ದರಿಂದ ಗ್ರೇಡ್ -3 ಹುದ್ದೆಗೆ ಮಹಿಳೆ ದಾಖಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ತಿರಸ್ಕರಿಸಿತ್ತು.