ಗಾಂಧಿ ಜಯಂತಿಯಂದು ನಡೆಯಿತು ಒಂದು ಪವಾಡ ಸದೃಶ ಘಟನೆ | ಗೋಕಾಕ್ ಫಾಲ್ಸ್ ನ 140 ಅಡಿ ಆಳದ ಕಂದಕಕ್ಕೆ ಬಿದ್ದರೂ ಸಾವು ಗೆದ್ದು ಬಂದ ಹುಡುಗ !!
ಚಿಕ್ಕೋಡಿ: ಅದೃಷ್ಟ ಚೆನ್ನಾಗಿದ್ರೆ ಯಮ ಕೂಡ ಕ್ಯಾಬಿ ನಹೀ ಕರ್ ಕರ್ಪಾಯೆಗ. ಗಟ್ಟಿ ಅದೃಷ್ಟ ಇದ್ದವನ ಹತ್ತಿರ ಯಮ ಕೂಡ ಸುಳಿಯಲು ಹೆದರುತ್ತಾನೆ ಎಂಬ ಮಾತಿಗೆ ಪೂರಕವಾದ ಘಟನೆಯೊಂದು ಬೆಳಗಾವಿಯ ಗೋಕಾಕ್ ಫಾಲ್ಸ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಕಲ್ಲು ಬಂಡೆಗಳ ಸಂದಿಯ 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಏನು ಆಗದೇ ಸಾವನ್ನೇ ಗೆದ್ದು ಬಂದು ಅಚ್ಚರಿ ಮೂಡಿಸಿದ್ದಾನೆ.
ಎಲ್ಲದಕ್ಕೂ ಚೆನ್ನಾಗಿರಬೇಕು. ಆ ಹುಡುಗನ ಟೈಮ್ ಸಕತ್ತಾಗಿತ್ತು. ಅದಕ್ಕಾಗಿ ಆ ಹುಡುಗನ ಜೀವ ಉಳಿದಿದೆ. ಗಾಂಧಿ ಜಯಂತಿ ಪ್ರಯುಕ್ತ ರಜೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಜೇವ ನಿವಾಸಿ ಪ್ರದೀಪ್ ಸಾಗರ್ ಎಂಬಾತ ಸ್ನೇಹಿತರೊಂದಿಗೆ ಗೋಕಾಕ್ ಫಾಲ್ಸ್ ವೀಕ್ಷಣೆಗೆಂದು ಬಂದಿದ್ದ. ಗೋಕಾಕ್ ಫಾಲ್ಸ್ ವ್ಯೂ ಪಾಯಿಂಟ್‌ಗೆ ಹೋಗುವ ವೇಳೆ ಆಯತಪ್ಪಿ 140 ಅಡಿ ಕಲ್ಲು ಸಂದಿಯೊಳಗೆ ಬಿದ್ದಿದ್ದ.
ಪ್ರದೀಪ್ ಕೆಳಗೆ ಬಿದ್ದ ತಕ್ಷಣ ಆತನ ಸ್ನೇಹಿತರಯ ಹೌಹಾರಿದ್ದರು. ಕೂಡಲೇ ಗೋಕಾಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆರವು ಕೋರಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ, ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಆಗಿದ್ದರು.
ಇದಾದ ಬಳಿಕ ಸ್ನೇಹಿತರು ಪೊಲೀಸರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಕೊನೆಗೂ ಪ್ರದೀಪ್‌ನನ್ನು ರಕ್ಷಣೆ ಮಾಡಿದೆ. ಬಳಿಕ ಆತನನ್ನು ಗೋಕಾಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗೋಕಾಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಸಾವು ಗೆದ್ದು ಯುವಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ.