ಎಟಿಎಂನೊಳಗೆ ಯುವತಿಯ ಭರ್ಜರಿ ಡ್ಯಾನ್ಸ್ | ಹಣ ಡ್ರಾ ಮಾಡಿಕೊಂಡು ಎಣಿಸುತ್ತಾ ಮಾಡಿದ ಆಕೆಯ ನೃತ್ಯದ ವಿಡಿಯೋ ಫುಲ್ ವೈರಲ್
ಈಗ ಎಲ್ಲಾ ಕಡೆ ಸೋಶಿಯಲ್ ಮೀಡಿಯಾದ್ದೇ ಹವಾ. ಪ್ರತಿದಿನವೂ ಒಂದಲ್ಲೊಂದು ವಿಡಿಯೋಗಳು ವೈರಲ್ ಆಗುತ್ತದೆ ಇರುತ್ತವೆ. ತುಂಬಾ ಜನರು ಫನ್ನಿ ವಿಡಿಯೋ ಗಳನ್ನು ನೋಡಲು ಕಾದು ಕುಳಿತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ನಿಜಕ್ಕೂ ನಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ. ಜೊತೆಗೆ, ಮೊಗದಲ್ಲೊಂದು ಖುಷಿಯ ನಗುವರಳಿಸುವಲ್ಲಿಯೂ ಇಂತಹ ದೃಶ್ಯಗಳು ಯಶಸ್ವಿಯಾಗುತ್ತವೆ.
ಪ್ರತಿದಿನ ಇಂಟರ್‌ನೆಟ್‌ನಲ್ಲಿ ಕಾಣಸಿಗುವ ಇಂತಹ ದೃಶ್ಯಗಳು ನಮ್ಮ ಮನಸ್ಸಿನ ಉಲ್ಲಾಸವನ್ನೂ ಹೆಚ್ಚು ಮಾಡುತ್ತವೆ ಎಂಬುದು ಸತ್ಯ. ಸದಾಕಾಲ ಇಂತಹ ವಿಡಿಯೋಗಳನ್ನು ನೋಡುತ್ತಲೇ ಇದ್ದು ಬಿಡೋಣ ಎಂದು ಹಲವು ಮಂದಿಗೆ ಅನಿಸಿರುತ್ತದೆ. ಇದೀಗ, ಇದೇ ಉಲ್ಲಾಸದಾಯಕ ದೃಶ್ಯಗಳ ಸಾಲಿಗೆ ಈಗ ಇನ್ನೊಂದು ವಿಡಿಯೋ ಸೇರಿದೆ.
ಇದು ಯುವತಿಯೊಬ್ಬಳು ಎಟಿಎಂ ಕೇಂದ್ರದೊಳಗೆ ಡಾನ್ಸ್ ಮಾಡುವ ದೃಶ್ಯ. ಸಾಮಾನ್ಯವಾಗಿ ಎಟಿಎಂ ಕೇಂದ್ರದೊಳಗೆ ಹೋಗುವಾಗ ಎಲ್ಲರೂ ಬಲು ಎಚ್ಚರಿಕೆಯಿಂದ ಇರುತ್ತಾರೆ. ಬಹಳ ಜಾಗರೂಕತೆಯಿಂದಲೇ ಪಿನ್ ನಂಬರ್ ಹಾಕಿ ಹಣ ಡ್ರಾ ಮಾಡುತ್ತಾರೆ. ಇತ್ತೀಚೆಗೆ ನಡೆಯುವ ಕೆಲವೊಂದು ವಂಚನೆ, ದುಷ್ಕೃತ್ಯಗಳ ಕಾರಣದಿಂದ ಜನರು ಎಟಿಎಂ ಕೇಂದ್ರದೊಳಗೆ ಮೈಯೆಲ್ಲಾ ಕಣ್ಣಾಗಿರುತ್ತಾರೆ.
ಆದರೆ, ಎಂದಾದರೂ ಹಣ ಡ್ರಾ ಮಾಡುವಾಗ ಎಟಿಎಂ ಕೇಂದ್ರದೊಳಗೆ ಡಾನ್ಸ್ ಮಾಡುವವರನ್ನು ನೋಡಿದ್ದೀರಾ? ಬಹುಶಃ ಹೆಚ್ಚಿನವರು ಇದಕ್ಕೆ `ಇಲ್ಲ’ ಎಂದೇ ಉತ್ತರ ಕೊಡಬಹುದು. ಒಂದೊಮ್ಮೆ ನೀವು ಕೂಡಾ ಇಂತಹ ನೃತ್ಯ ನೋಡಿಲ್ಲವಾದರೆ ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ. ಇದು ಯುವತಿಯೊಬ್ಬಳು ಹಣ ಡ್ರಾ ಮಾಡುವಾಗ ಮತ್ತು ಹಣವನ್ನು ಎಣಿಸಿದ ಖುಷಿಯಲ್ಲಿ ಕುಣಿಯುವ ತಮಾಷೆಯ ದೃಶ್ಯ. ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎಟಿಎಂ ಮಷಿನ್ ಮುಂದೆ ನಿಂತು ಡಾನ್ಸ್ ಮಾಡುವ ಈ ಯುವತಿ ಪಿನ್ ನಂಬರ್ ಹಾಕಿ ಮತ್ತೆ ಡಾನ್ಸ್ ಮಾಡುತ್ತಾಳೆ. ಮಷಿನ್‌ನಿಂದ ಹಣ ಈಚೆಗೆ ಬರುತ್ತಿದ್ದಂತೆಯೇ ಅದನ್ನು ಎಣಿಸಿ ಮತ್ತೆ ಇವಳು ಖುಷಿಯಿಂದ ಕುಣಿಯುವ ದೃಶ್ಯ, ಎಟಿಎಂ ಯಂತ್ರಕ್ಕೆ ನಮಿಸಿ ಹೋಗುವ ಕ್ಷಣ ಒಂದು ಕ್ಷಣ ಅಚ್ಚರಿ ಮತ್ತು ಮೊಗದಲ್ಲಿ ನಗುವರಳಿಸುತ್ತದೆ.
ಸಹಜವಾಗಿಯೇ ಈ ಹುಡುಗಿ ಹಣ ಡ್ರಾ ಮಾಡುವ ಶೈಲಿ ಜನರನ್ನು ಆಶ್ಚರ್ಯಚಕಿತರನ್ನಾಗಿಸುವ ಜೊತೆಗೆ ಈ ದೃಶ್ಯವನ್ನು ಆನಂದದಿಂದ ನೋಡುವಂತೆ ಮಾಡಿದೆ. ಈ ಹುಡುಗಿ ನಿಜವಾಗಿಯೂ ಯಾಕೆ ಹೀಗೆ ನೃತ್ಯ ಮಾಡುತ್ತಾಳೆ ಎಂಬುದು ಜನರಿಗೆ ಅರ್ಥವಾಗಿಲ್ಲ. ಆದರೆ, ವಿಡಿಯೋದಲ್ಲಿರುವ ಬರಹದಲ್ಲಿ `ಸಂಬಳದ ಖುಷಿ’ ಎಂದು ಉಲ್ಲೇಖಿಸಲಾಗಿದೆ. ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಮತ್ತು ಮೆಚ್ಚುಗೆಯ ಪ್ರತಿಕ್ರಿಯೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯ ನೋಡಿದ ಎಲ್ಲರೂ ನಸುನಕ್ಕಿದ್ದಾರೆ. ಜೊತೆಗೆ, ಹಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.