ಡ್ರೈವಿಂಗ್ ವೇಳೆ ಬ್ಲೂಟೂತ್, ಇಯರ್ ಫೋನ್ ಬಳಕೆ ಮಾಡುವವರೇ ಎಚ್ಚರ!!|ಇನ್ನು ಮುಂದೆ ಚಾಲನೆ ವೇಳೆ ಎಲೆಕ್ಟ್ರಾನಿಕ್ ಸಾಧನ ಬಳಸಿದರೂ ಬೀಳಲಿದೆ ದಂಡ
ಬೆಂಗಳೂರು: ಡ್ರೈವಿಂಗ್ ವೇಳೆ ಹೆಚ್ಚಿನ ಜನರು ಮನೋರಂಜನೆಯಾಗಿ ಅಥವಾ ಫೋನ್ ಕಾಲ್ ಗಾಗಿ ಬ್ಲ್ಯೂಟೂತ್, ಇಯರ್ ಫೋನ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗೆ ಇದೆ. ಇದೀಗ ಇದರ ವಿರುದ್ಧ ಬೆಂಗಳೂರು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು, ಒಂದು ವೇಳೆ ನೀವು ಬ್ಲ್ಯೂಟೂತ್ ಅಥವಾ ಹೆಡ್ಫೋನ್ ಬಳಸಿ ವಾಹನ ಚಾಲನೆ ಮಾಡಿದ್ರೆ ನಿಮ್ಮ ವಿರುದ್ದ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿದ್ದು, ಪೋಲಿಸರು ಈ ವೇಳೆ 1000 ರೂಪಾಯಿಯ ದಂಡ ವಿಧಿಸಿ ರಶೀದಿ ನೀಡಲಿದ್ದಾರಂತೆ.
ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಹೆಲ್ಮೆಟ್ ಧರಿಸಿ ಅದರಡಿಯಲ್ಲಿ ಇಯರ್ ಫೋನ್ ಹಾಕಿಕೊಂಡರು ಕೂಡ ಅದು ಕಾನೂನು ಬಾಹಿರವಾಗಿದೆ. ಇದಲ್ಲದೇ ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ.
ಇನ್ನೂ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳಿಕೊಂಡು ವಾಹನಗಳನ್ನು ಸವಾರಿ ಮಾಡುವ ವೇಳೆಯಲ್ಲಿ ವಾಹನಗಳ ಹಾರನ್ ಕೇಳಿಸದೇ ಅಪಘಾತವಾಗಿರುವ ಘಟನೆಗಳು ಕೂಡ ಹೆಚ್ಚು ನಮ್ಮಲ್ಲಿ ಸಂಭವಿಸಿದೆ ಕೂಡ. ಈ ನಿಟ್ಟಿನಲ್ಲಿ ನೀವು ಏನು ಆದ್ರು ವಾಹನ ಚಲಾಯಿಸುವ ವೇಳೆಯಲ್ಲಿ ಬ್ಲ್ಯೂಟೂತ್, ಇಯರ್ ಫೋನ್‌ಗಳು ನಿಮ್ಮ ಕಿವಿಗೆ ಹಾಕಿಕೊಳ್ಳುವ ಮುನ್ನ ಎಚ್ಚರ ವಹಿಸಿ ಯಾಕಂದ್ರೆ ವಾಹನ ಚಲಾವಣೆ ವೇಳೆ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ.