ಸುಳ್ಯ | ಕನಕಮಜಲಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು

Share the Article

ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯದ ಕನಕಮಜಲು ಎಂಬಲ್ಲಿ ನಡೆದಿದೆ.

ಪೆರುಂಬಾರು ನಿವಾಸಿ ಜಯರಾಮ ಗೌಡ(52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ಬಾರದಿದ್ದ ಅವರನ್ನು ಇಂದು ಮುಂಜಾನೆ ವೇಳೆಗೆ ಹುಡುಕಾಟ ನಡೆಸಲು ಆರಂಭಿಸಿದ್ದಾರೆ.

ಈ ವೇಳೆ ಅವರ ಮೃತದೇಹ ಮನೆಯಿಂದ 1ಕಿ.ಮೀ ದೂರದ ಕಾರಿಂಜ ಸಿಆರ್ ಸಿ ಕಾಲೊನಿ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ. ರಾತ್ರಿವೇಳೆ ಸಂಚರಿಸುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿರುವುದಾಗಿ ಶಂಕಿಸಲಾಗಿದೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave A Reply