ಬಸ್ಸಿನಲ್ಲಿ ಕಿಟಕಿ ಬದಿ ನಿದ್ದೆ ಮಾಡುತ್ತಾ ಪ್ರಯಾಣಿಸುವಾಗ ಎಚ್ಚರ !! ಇಲ್ಲೊಬ್ಬ ವ್ಯಾಪಾರಿ ನಿದ್ದೇಲಿ ಕೈ ಹೊರ ಹಾಕಿ ಪ್ರಯಾಣಿಸುವಾಗ ನಡೆಯಿತು ಭಯಾನಕ ಘಟನೆ
ಬಸ್ಸಿನಲ್ಲಿ ಪ್ರಯಾಣಿಸುವಾಗ ನಿದ್ದೆ ಬರುವುದು ಸಹಜ. ಹಾಗಂತ ಮೈಮರೆತು ನಿದ್ದೆ ಮಾಡುವುದು ತುಂಬಾನೇ ಡೇಂಜರ್. ಬಸ್ಸಿನಿಂದ ಕೈ ಮತ್ತು ತಲೆಯನ್ನು ಹೊರಕ್ಕೆ ಹಾಕಬಾರದು ಎಂದು ಹೇಳುತ್ತಲೇ ಇರುತ್ತಾರೆ. ಈ ಬಗ್ಗೆ ಬಸ್ಸಿನಲ್ಲಿಯೂ ಎಚ್ಚರಿಕೆಯ ಫಲಕ ಅಳವಡಿಸಲಾಗಿರುತ್ತದೆ. ಆದರೆ ಇದರ ಹೊರತಾಗಿಯೂ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.
ಅಂಥದ್ದೇ ಒಂದು ಭಯಾನಕ ಘಟನೆ ಹಾವೇರಿಯ ಹಿರೆಕೇರೂರಿನಲ್ಲಿ ನಡೆದಿದೆ. ಬಸ್ಸಿನ ಕಿಟಕಿಯ ಹೊರಗೆ ಕೈ ಚಾಚಿದ ವ್ಯಾಪಾರಿಯೊಬ್ಬನ ಕೈ ಕಟ್ ಆಗಿದೆ. ನದೀಮ್ ಸಾಬ ತಾವರಗಿ ಎಂಬ ತರಕಾರಿ ವ್ಯಾಪಾರಿಯ ಕೈ ಕಟ್ ಆಗಿದೆ.
ಇವರು ಹಾವೇರಿ ಜಿಲ್ಲೆಯ ಹಿರೆಕೇರೂರು ಪಟ್ಟಣದ ನಿವಾಸಿ. ಅಂಕೋಲದಿಂದ ಹಿರೆಕೇರೂರಿಗೆ ಬರುವಾಗ ನಡೆದಿರುವ ದುರ್ಘಟನೆ ಇದಾಗಿದೆ. ಇವರು ಬಸ್ನಲ್ಲಿ ನಿದ್ದೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಅವರ ಕೈ ಹೊರಗೆ ಚಾಚಲಾಗಿತ್ತು. ಈ ಸಂದರ್ಭದಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ ವಾಹನದ ಕ್ಯಾಬಿನ್ ಕಬ್ಬಿಣ ಬಡಿದಿದ್ದಕ್ಕೆ ಹ್ಯಾಂಡ್ ಕಟ್ ಆಗಿದೆ. ನೋವಿನಿಂದ ಇವರು ಚೀರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೈ ಕಟ್ ಆಗಿರುವುದನ್ನು ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ನದೀಮ್ ಅವರನ್ನು ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಾಗಾಗಿ ಬಸ್ ನಲ್ಲಿ ಪ್ರಯಾಣಿಸುವಾಗ ಆದಷ್ಟು ಎಚ್ಚರವಾಗಿರಿ. ದೂರ ಪ್ರಯಾಣ ಹಾಗೂ ನಿದ್ದೆ ಬರುವ ಲಕ್ಷಣಗಳು ಕಂಡುಬಂದರೆ ಕಿಟಕಿ ಬದಿಯಲ್ಲದೆ ಬೇರೆ ಸೀಟಿನಲ್ಲಿ ಕುಳಿತು ನಿದ್ದೆ ಮಾಡಿ. ಈ ರೀತಿಯ ಅವಘಡಕ್ಕೆ ಎಂದೂ ಅವಕಾಶ ಮಾಡಿಕೊಡದಿರಿ.