ಮಾರಕ ಕ್ಯಾನ್ಸರ್ ರೋಗಕ್ಕೆ ಮಾರಕವಾಗಬಲ್ಲ ಹಿತ್ತಲ ಗಿಡ ಪತ್ತೆಹಚ್ಚಿದ ಮಂಗಳೂರಿನ ಸಸ್ಯವಿಜ್ಞಾನಿಗಳು

ನಮ್ಮ ಪೂರ್ವಜರು ಪ್ರಕೃತಿಯ ಆರಾಧಕರು. ಪ್ರಕೃತಿಯನ್ನು ಬದುಕಾಗಿ ಇರಿಸಿಕೊಂಡವರು.ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಆಧುನಿಕತೆಯತ್ತ ಜೀವನಶೈಲಿ ಸಾಗಿದಾಗ ಗಿಡಮೂಲಿಕೆಗಳ ಚಿಕಿತ್ಸಾ ಪದ್ಧತಿ ಮೂಢನಂಬಿಕೆ ಎಂಬ ಅಭಿಪ್ರಾಯಕ್ಕೆ ಬಂದು ಬಿಟ್ಟು ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಹಿತ್ತಲಗಿಡವೇ ಮಾರಕ ಕ್ಯಾನ್ಸರ್ ನಿವಾರಕ ಎಂಬುದನ್ನು ಮಂಗಳೂರಿನ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಈ ಬಳ್ಳಿಯು ಸಾಮಾನ್ಯವಾಗಿ ಕೃಷಿ ತೋಟಗಳಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಿಗುತ್ತದೆ. ಈ ಹಡೇ ಬಳ್ಳಿಯು ಮಾರಕ ಕ್ಯಾನ್ಸರ್ ನಿವಾರಕ ಅನ್ನೋದನ್ನು ಮಂಗಳೂರಿನ ಸಸ್ಯವಿಜ್ಞಾನಿಗಳು ಸಾಬೀತು ಮಾಡಿದ್ದಾರೆ.
ಕ್ಯಾನ್ಸರ್ ಎಂಬುದು ಒಂದು ಮಾರಕ ರೋಗವಾಗಿದೆ. ಇಂತಹ ಮಾರಕ ರೋಗಕ್ಕೆ ಹಿತ್ತಲ ಗಿಡ ಔಷಧಿ ಯಾಗಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಪತ್ತೆ ಮಾಡುವ ಸಂದರ್ಭದಲ್ಲಿ ಕ್ಯಾನ್ಸರ್ ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್ ಅಂಶ ಪತ್ತೆಯಾಗಿದೆ.ಹಡೇ ಬಳ್ಳಿಯು ಕ್ಯಾನ್ಸರ್ ಗೆ ರಾಮಬಾಣವಾಗಿದೆ ಎಂಬ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರದಿಂದ ಪೇಟೆಂಟನ್ನು ಪಡೆದಿದ್ದಾರೆ. ಇಂತಹ ಸಂಶೋಧನೆಯನ್ನು ಮಾಡಿದ ನಮ್ಮ ಮಂಗಳೂರಿನ ಸಸ್ಯ ಸಂಶೋಧಕರ ಬಗ್ಗೆ ಹೆಮ್ಮೆ ಅನಿಸುತ್ತದೆ.
ಹಡೇ ಬಳ್ಳಿಯ ಬೊಟಾನಿಕಲ್ ಹೆಸರು Cyclea peltata. ಇದನ್ನು ಸಾಮಾನ್ಯವಾಗಿ ಇಂಡಿಯನ್ ಮೂನ್ ಸೀಡ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಪ ಡಾ ವಲ ಬಳ್ಳಿ,ಹಡೇ ಬಳ್ಳಿ ಎಂದು ,ಮಲಯಾಳಂ ನಲ್ಲಿ ಪಡತಾಲಿ ಎಂದು ತಮಿಳಿನಲ್ಲಿ ಪಾಠ ಎನ್ನುತ್ತಾರೆ.
ಹಡೇ ಬಳ್ಳಿಯು ಒಂದುರೀತಿಯ ಬಳ್ಳಿ ಗಿಡವಾಗಿದ್ದು, ಮರಗಳಿಗೆ ಸುತ್ತುವರಿದಿರುತ್ತದೆ. ಇದರ ಎಲೆಗಳು ಹಾರ್ಟ್ ಶೇಪ್ ಹೊಂದಿದೆ. ಇದರ ಬೇರು ಹಾಗೂ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದೆ.
ಮಂಗಳೂರು ವಿಶ್ವವಿದ್ಯಾಲಯದ ಇಬ್ಬರು ಸಂಶೋಧಕರಾದ ಕೆ. ಆರ್ ಚಂದ್ರಶೇಖರ್ ಹಾಗೂ ಭಾಗ್ಯ ನೆಕ್ರಕಾಲಯ ಇವರು ಹಡೇ ಬಳ್ಳಿಯು ಕ್ಯಾನ್ಸರ್ ನಿವಾರಕ ಎಂಬುವುದನ್ನು ಸಂಶೋಧಿಸಿದ್ದಾರೆ.