ಪ್ರೋಟೀನ್​ ಶೇಕ್​ ಎಂದು ಪತಿಗೆ ವಿಷ ಕೊಡುತ್ತಿದ್ದ ಖತರ್ನಾಕ್ ಪತ್ನಿ!!|ಅಷ್ಟಕ್ಕೂ ಈಕೆಯ ಈ ನಡವಳಿಕೆಗೆ ಕಾರಣ?

ಆಕೆಗೆ ತನ್ನ ಪತಿಯ ಮೇಲೆ ಅದೇನು ಸಿಟ್ಟಿತ್ತೋ ಏನು!!? ಇದರ ಪರಿಣಾಮವಾಗಿ ಆಕೆ ಮಾತ್ರ ಭರ್ಜರಿ ಸೇಡು ತೀರಿಸಿಕೊಳ್ಳಲು ಹೊರಟ್ಟಿದ್ದು ಅಂತೂ ಸುಳ್ಳಲ್ಲ. ಹೌದು ನಾವು ನೋಡೋ ಪ್ರಕಾರ ಗಂಡ- ಹೆಂಡತಿ ಒಮ್ಮೆ ಜಗಳವಾದರೆ ಒಂದು ತಾಸು ಬಿಟ್ಟು ಅದೆಲ್ಲವನ್ನು ಮರೆತು ಮತ್ತೆ ನಗು-ನಗುತ್ತಾ ಖುಷಿಯಲ್ಲಿ ಬಾಳುತ್ತಾರೆ. ಅವರ ಜಗಳ ಉಂಡು ಮಲಗುವ ತನಕ ಮಾತ್ರ ಸೀಮಿತವಾಗಿರುತ್ತದೆ.

ಆದರೆ ಇಲ್ಲೊಂದು ಗಂಡ- ಹೆಂತಿ ಜಗಳದಿಂದ ಗಂಡ ಸಾವಿನಂಚಿನತ್ತ ತೆರಳಿ ಬದುಕಿ ಬಂದಿರುವುದು ವಿಶೇಷ ಎಂಬಂತಿದೆ. ಅಷ್ಟಕ್ಕೂ ಪತ್ನಿ ತನ್ನ ಪತಿಗೆ ಮಾಡಿದ್ದದರೂ ಏನು ಎಂದು ನೀವೇ ನೋಡಿ.

ಗಂಡನ ಮೇಲೆ ಅದೇನು ಸಿಟ್ಟಿತ್ತೋ ಏನೋ ಪ್ರೋಟೀನ್​ ಶೇಕ್​ನಲ್ಲಿ ವಿಷ ಬೆರೆಸಿ ಪತಿಯನ್ನು ಯಮಲೋಕಕ್ಕೆ ಕಳುಹಿಸಲ ಯತ್ನಿಸಿದ್ದಾಳೆ ಪಾಪಿ ಪತ್ನಿ.ಗಂಡ- ಹೆಂಡತಿ ಜಗಳದಿಂದಾಗಿ ಕೊನೆಗೆ ಹೆಂಡತಿಯೇ ಗಂಡನನ್ನು ತನ್ನ ಕೈಯಾರೆ ಕೊಲ್ಲಲು ಯತ್ನಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

Ad Widget / / Ad Widget

56 ವರ್ಷದ ಜೆಡಿ ಮೆಕ್ಕೇಬ್​ ಮತ್ತು ಪತ್ನಿ ಎರಿನ್​ ದಕ್ಷಿಣ ಕೆರೊಲಿನಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ವಿವಾಹವಾಗಿ 17 ವರ್ಷ ಕಳೆದಿದ್ದು, ಈ ಜೋಡಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಜಿಮ್​ನಿಂದ ಸುಸ್ತಾಗಿ ಬಂದಾಗ ಎರಿಕ್​ಗೆ ಜೆಡಿ ಮೆಕ್ಕೇಬ್ ಪ್ರೋಟಿನ್​ ಶೇಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ಹಾಗಾಗಿ ಎರಿನ್​ ಕೂಡ ಪತಿಗಾಗಿ ಪ್ರೋಟಿನ್​ ಶೇಕ್​ ಮಾಡಿಕೊಡುತ್ತಿದ್ದರು.

ಪ್ರತಿನಿತ್ಯ ಜೆಡಿ ಮೆಕ್ಕೇಬ್​ ಹೆಂಡತಿ ಕೊಡುವ ಪ್ರೋಟಿನ್​ ಶೇಕ್​ ಕುಡಿಯುತಿದ್ದರು. ಆದರೆ ದಿನ ಕಳೆದಂತೆ ದೇಹದ ತೂಕ ಹೆಚ್ಚಾಗುವ ಬದಲು ಕಡಿಮೆಯಾಗ ತೊಡಗುತ್ತದೆ. ಇದ್ದಕ್ಕಿದ್ದಂತೆಯೇ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಸಮಸ್ಯೆಯಿರುವುದು ಗೊತ್ತಾಗುತ್ತದೆ.

ಜೆಡಿ ಮೆಕ್ಕೇಬ್​ ಪ್ರೋಟಿನ್​ ಶೇಕ್​ ಕುಡಿದಂತೆ ಹೊಟ್ಟೆ, ಕೀಲು ನೋಬು ಮತ್ತು ಕರುಳಿನ ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ವಿಪರೀತ ನೋವು ಅನುಭವಿಸುತ್ತಾರೆ. ತೂಕವನ್ನು ಕಳೆಯುತ್ತಾರೆ. ವೈದ್ಯರು ಪರೀಕ್ಷಿಸಿದ ಬಳಿಕ ಕ್ಯಾನ್ಸರ್ ​ರೋಗಕ್ಕೆ ತುತ್ತಾಗಿರುವು ಪತ್ತೆಯಾಗುತ್ತದೆ.

ಯಾವಾಗ ಜೆಡಿ ಮೆಕ್ಕೇಬ್​ ಅನಾರೋಗ್ಯ ಕಾಡಿತು ಅಂದಿನಿಂದ ಎರಿನ್​ ನಡವಳಿಕೆ ಬದಲಾಗುತ್ತದೆ. ಜೆಡಿಯನ್ನು ದೂಷಿಸುತ್ತಾಳೆ ಮೋಸ ಮಾಡಿದೆ ಎಂದು ಹೇಳುತ್ತಾಳೆ. ಡ್ರಗ್ಸ್​ ಮತ್ತು ಮದ್ಯದ ಕಾರಣದಿಂದ ಹೀಗೆ ಮಾಡಿಕೊಂಡೆ ಎಂದು ಗಂಡನಿಗೆ ಬೈಯುತ್ತಾಳೆ.ಅಷ್ಟು ಮಾತ್ರವಲ್ಲದೆ ಆತನಿಗೆ ವಿಚ್ಛೇದನ ನೀಡುತ್ತಾಳೆ.

ವೈದ್ಯಕೀಯ ಪರೀಕ್ಷೆಯಲ್ಲಿ ಜೆಡಿ ಮೆಕ್ಕೇಬ್ ತನ್ನ ತೂಕ ಹೆಚ್ಚಿಸಲು​ ಪ್ರೋಟಿನ್​ ಶೇಕ್​ ಕುಡಿಯುತ್ತಿದ್ದರು ಎಂದು ಗೊತ್ತಾಗಿದೆ. ಆದರೆ ಆ ಪ್ರೋಟಿನ್​ ಶೇಕ್​ನಲ್ಲಿ ವಿಷದ ಅಂಶವೊಂದು ಕಂಡುಬಂದಿದ್ದು, ಎರಿಕ್​ ತನ್ನ ಗಂಡನಿದೆ ವಿಷಕಾರಿ ಪ್ರೋಟಿನ್​ ಶೇಕ್​ ಅನ್ನು ನೀಡುತ್ತಿದ್ದಳು ಎಂದು ಕೊನೆಗಳಿಗೆಯಲ್ಲಿ ಗೊತ್ತಾಗಿದೆ.

ಎರಿನ್​ ತನ್ನ ಪತಿಗೆ ಆರ್ಸೆನಿಕ್​ ಬೆರೆಸಿ ಪ್ರೋಟೀನ್​ ಶೇಕ್ ನೀಡುತ್ತಿದ್ದಳು. ಇದನ್ನು ಸೇವಿಸಿದ ಪತಿಯ ದೇಹ ಕುಗ್ಗಲು ಪ್ರಾರಂಭವಾಯಿತು. ದಿನ ಕಳೆದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಸಮಯಕ್ಕೆ ಸರಿಯಾಗಿ ವೈದ್ಯ ರನ್ನು ಭೇಟಿಯಾದ ಬಳಿಕ ಜೆಡಿಗೆ ನಿಜಾಂಶ ಗೊತ್ತಾಗಿದೆ. ತನ್ನ ಮಡದಿ ಮಾಡುತ್ತದ್ದ ಮಹಾತ್ಕಾರ್ಯ ತಿಳಿಯಿತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಜೆಡಿ ಸಾವಿನಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ಈ ಘಟನೆ ಕುರಿತಂತೆ ಕೇಸ್​ ದಾಖಲಾಗಿದ್ದು, ಸದ್ಯ ತನಿಖೆಯಲ್ಲಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: