ಬೆಳ್ತಂಗಡಿಯಲ್ಲಿ ನಿಲ್ಲದ ಗಾಂಜಾ ಘಾಟು | ಆರೋಪಿ ಸಹಿತ 70 ಸಾವಿರ ಮೌಲ್ಯದ ಗಾಂಜಾ ವಶಕ್ಕೆ
ಬೆಳ್ತಂಗಡಿ : ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಘಟನೆ ಸೆ.20 ರಂದು ನಡೆದಿದೆ.
ಇಳಂತಿಲ ಗ್ರಾಮದ ನೇಜಿಕಾರು ಅಂಬೊಟ್ಟು ನಿವಾಸಿ ಮಹಮ್ಮದ್ ಶಾಫಿ ಯಾನೇ ನೇಜಿಕಾರ್ ಶಾಫಿ(29.ವ) ಎಂಬವರೇ ಬಂಧಿತ ಆರೋಪಿಯಾಗಿದ್ದಾರೆ.
ಸೆ.20 ರಂದು ಬೆಳಿಗ್ಗೆ ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ನಂದ ಕುಮಾರ್ ಮತ್ತು ಸಿಬ್ಬಂದಿಗಳು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆಗೆ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬರುತ್ತಿದ್ದ ಆರೋಪಿ ಮಹಮ್ಮದ್ ಶಾಫಿ ಎಂಬಾತನನ್ನು ತಡೆದು ನಿಲ್ಲಿಸಿದ್ದು, ವಿಚಾರಣೆ ವೇಳೆ ಆತನ ಬ್ಯಾಗ್ ನಲ್ಲಿ 2 ಕೆಜಿ 55 ಗ್ರಾಂ ತೂಕದ ಒಟ್ಟು ರೂ.71,925 ಮೌಲ್ಯದ ಗಾಂಜಾ ಪತ್ತೆಯಾಗಿರುತ್ತದೆ. ಕೂಡಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ಬ್ಯಾಗ್ ನಲ್ಲಿದ್ದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ಇಬ್ರಾಹಿಂ ಗರ್ಡಾಡಿ ,ಬೆಳ್ತಂಗಡಿ ಠಾಣಾ ಎಎಸೈ ಕುಲಜ್ಯೋತಿ ತಿಲಕ್, ಸಿಬ್ಬಂದಿಗಳಾದ ಲಾರೆನ್ಸ್, ಗುತ್ಯಪ್ಪ, ಚರಣ್ ರಾಜ್, ಮಾಲತೇಶ್,ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.