ಆನೆ ತನ್ನ ಮರಿಯಾನೆಯನ್ನು ಎಬ್ಬಿಸುವ ಪಾಡಂತೂ ಸಾಕೋ ಸಾಕು ಎಂಬಂತಿದೆ !! ಆದ್ರೆ ಮರಿಯಾನೆ ಮಾತ್ರ ‘ಇರಮ್ಮಾ ಇನ್ನೂ ಸ್ವಲ್ಪ ಮಲಗ್ತೀನಿ’ ಅನ್ನೋ ರೀತಿ ಇದೆ ತಾಯಿ-ಮಗುವಿನ ಸಂಭಾಷಣೆ

ಮನುಷ್ಯರಂತೆಯೇ ಕುಟುಂಬ ಜೀವನ ಮಾಡುವ ಪ್ರಾಣಿ ಎಂದರೆ ಆನೆ. ಸಾಮಾನ್ಯವಾಗಿ ಆನೆಗಳು ತಮ್ಮದೇ ಆದ ಸಾಮಾಜಿಕ ನಿಯಮದಡಿ ಬದುಕುತ್ತವೆ. ಮನುಷ್ಯರಂತೆಯೇ ಗಂಡು ಮತ್ತು ಹೆಣ್ಣಾನೆಗಳ ಸಾಮಾಜಿಕ ಜೀವನ ಬೇರೆ ಬೇರೆಯಾಗಿರುತ್ತದೆ. ಹೆಣ್ಣು ಆನೆಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಕುಟುಂಬ ವ್ಯವಸ್ಥೆಯಲ್ಲಿಯೇ ಕಳೆಯುತ್ತವೆ. ಆನೆಗಳ ಪ್ರಪಂಚದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿದೆ. ಅದರಲ್ಲೂ ತಾಯಿ ಹಾಗೂ ಮರಿಯಾನೆಯ ಸಂಬಂಧ ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ನಿದರ್ಶನವಾಗಬಲ್ಲವು ವಿಡಿಯೋ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ.

 

ತಾಯಿ ಆನೆ ತನ್ನ ಮರಿಯನ್ನು ನಿದ್ದೆಯಿಂದ ಎದ್ದೇಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮರಿ ಎದ್ದೇಳುವಂತೆ ತಾಯಿ ಆನೆ ತುಂಬಾ ಪ್ರಯತ್ನ ಪಡುತ್ತಿದೆ. ಆದರೂ ಸಹ ಮರಿ ಆನೆ ಮಾತ್ರ ನಿದ್ದೆಯಿಂದ ಎದ್ದೇಳುತ್ತಲೇ ಇಲ್ಲ. ದೀರ್ಘ ನಿದ್ದೆಯಲ್ಲಿರುವ ಆನೆ ಮರಿಯ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ವಿಡಿಯೋಗಳು ಮೆಚ್ಚುವಂತಿರುತ್ತವೆ. ಅದರಲ್ಲಿಯೂ ಸಹ ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ. ಅಂಥಹುದೇ ದೃಶ್ಯ ಇದಾಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.

https://twitter.com/buitengebieden_/status/1438966385380663299?s=20

ವಿಡಿಯೋದಲ್ಲಿ ಗಾಢ ನಿದ್ದೆಯಲ್ಲಿದ್ದ ಆನೆ ಮರಿಯನ್ನು ಎದ್ದೇಳಿಸಲು ತಾಯಿ ಆನೆ ಪ್ರಯತ್ನ ಪಡುತ್ತಿದೆ. ಆದರೂ ಸಹ ಮರಿ ಆನೆಗೆ ಎಚ್ಚರವೇ ಆಗುತ್ತಿಲ್ಲ. ತನ್ನ ಸೊಂಡಿಲಿನಿಂದ ಮರಿಯನ್ನು ಎದ್ದೇಳಿಸಲು ಪ್ರಯತ್ನಿಸುತ್ತದೆ, ಆದರೂ ಮರಿ ಆನೆ ಎಚ್ಚರಗೊಳ್ಳಲಿಲ್ಲ. ಕೊನೆಗೆ ದೂರದಲ್ಲೆಲ್ಲೋ ಇದ್ದ ಕೀಪರ್ ಬಂದು ಮರಿ ಆನೆಯನ್ನು ಎದ್ದೇಳಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಈ ವಿಡಿಯೋ ತುಂಬಾ ಹಳೇಯದ್ದು, 2017ರಲ್ಲಿ ಸೆರೆ ಹಿಡಿದ ದೃಶ್ಯ. ಆದರೆ ಇತ್ತೀಚೆಗೆ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯ ಇದೀಗ 383 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡು ವೈರಲ್ ಆಗಿದೆ.

Leave A Reply

Your email address will not be published.