ಬೆಳ್ತಂಗಡಿ | ಕಾಲು ಜಾರಿ ನದಿಗೆ ಬಿದ್ದಿದ್ದ ಮಹಿಳೆಯ ಮೃತದೇಹ ಪತ್ತೆ

Share the Article

ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿಯ ಗಡಾಯಿಕಲ್ಲಿನ ಬಳಿ ಇರುವ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮೃತರನ್ನು ಮಂಜೊಟ್ಟಿ ಬಳಿಯ ಬೀಜದಡಿ ನಿವಾಸಿ ಚೆನ್ನಮ್ಮ (70) ಎಂದು ಗುರುತಿಸಲಾಗಿದೆ.

ಚೆನ್ನಮ್ಮ ಅವರು ಮಂಗಳವಾರ ಔಷಧಿ ತರಲೆಂದು ತೆರಳಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ನಾಪತ್ತೆಯಾಗಿದ್ದ ಇವರನ್ನು ಹುಡುಕುವ ಕಾರ್ಯ ನಡೆಯುತ್ತಿತ್ತು. ಇಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಸದ್ಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

Leave A Reply