ಸುಳ್ಯ : ಗ್ರಾ.ಪಂ.ಸದಸ್ಯೆಯನ್ನು ಸೇತುವೆಯಿಂದ ತಳ್ಳಿ ಹಾಕಿದ ನೆರೆಮನೆಯ ವ್ಯಕ್ತಿ | ಇಬ್ಬರೂ ನಾಪತ್ತೆ

Share the Article

ಸುಳ್ಯ : ಗ್ರಾ.ಪಂ. ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿ ಹಾಕಿದ ಘಟನೆಯೊಂದು ಚೆಂಬು ಗ್ರಾಮದಲ್ಲಿ ಸಂಭವಿಸಿದೆ.

ಸುಳ್ಯ ತಾಲೂಕಿನ ಅಂಚಿನಲ್ಲಿರುವ ಕೊಡಗಿನ ಚೆಂಬು ಗ್ರಾಮ ಪಂಚಾಯತ್‌ನ ಸದಸ್ಯೆ ದಬ್ಬಡ್ಕ ಕಮಲ ಎಂಬವರು ನಿನ್ನೆ ಸಂಜೆ ಇತರರೊಂದಿಗೆ ಹತ್ತಿರದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಬ್ಬಡ್ಕ ಸೇತುವೆ ಮೇಲೆ ನೆರೆ ಮನೆಯ ಮುತ್ತು ಎಂಬಾತ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದನೆನ್ನಲಾಗಿದೆ.

ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕಮಲ ಅವರ ಸುಳಿವು ಕೂಡ ದೊರೆತಿಲ್ಲ ಎಂದು ತಿಳಿದುಬಂದಿದೆ.

Leave A Reply