2024 ರೊಳಗೆ ಕಾಶ್ಮೀರಕ್ಕೆ ರೈಲು ಸೇವೆ : ವಿಶ್ವಾಸ ವ್ಯಕ್ತಪಡಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Share the Article

2024 ರ ಮೊದಲು ಕಾಶ್ಮೀರ ಕಣಿವೆಗೆ ರೈಲು ಸಂಪರ್ಕವನ್ನು ತೆರೆಯಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕದ ಮೂಲಕ ದೇಶದ ದೂರದ ಪ್ರದೇಶಗಳನ್ನು ಲಿಂಕ್ ಮಾಡಲು ವ್ಯವಸ್ಥಿತ ಸಮೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಜಮ್ಮು ರೈಲ್ವೇ ನಿಲ್ದಾಣ ಮತ್ತು ಸಮುದಾಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿದ ಸಚಿವರು, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಅವಲೋಕನ ನಡೆಸಿದರು.

ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸಚಿವರ ಬೇಟಿ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಪರ್ಕ ಉಪಕ್ರಮದ ಭಾಗವಾಗಿದೆ. 2024 ರ ಮೊದಲು ಕಾಶ್ಮೀರಕ್ಕೆ ರೈಲು ಸಂಪರ್ಕವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ರೈಲ್ವೆ ಸಚಿವರು ಭರವಸೆ ನೀಡಿದರು ಎಂದು ಬಲ್ಲ ಮೂಲಗಳು ತಿಳಿಸಿದೆ.ಅವರು ಜಮ್ಮು ರೈಲು ನಿಲ್ದಾಣವನ್ನು ಪರಿಶೀಲಿಸಿದರು.

ಮತ್ತು ಜಮ್ಮು ಮತ್ತು ಕಥುವಾ ರೈಲು ನಿಲ್ದಾಣಗಳ ಉನ್ನತೀಕರಣ ಯೋಜನೆಯನ್ನು ಅಧ್ಯಯನ ಮಾಡಿದರು. ರೈಲ್ವೆ ಮೂಲಕ ಜಮ್ಮು ಮತ್ತು ಸುತ್ತಮುತ್ತ ಬರುವ ಯಾತ್ರಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೈಷ್ಣವ್ ಭರವಸೆ ನೀಡಿದರು.

ಮಾಜಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮುಂದಿನ ವರ್ಷದೊಳಗೆ ಕತ್ರಾ-ಖಾಜಿಗುಂಡ್ ಟ್ರ್ಯಾಕ್ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದರು.

“ಜಮ್ಮು ಮತ್ತು ಕಾಶ್ಮೀರದಲ್ಲಿ ಉಧಂಪುರ್ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಗಿದೆ ಮತ್ತು ಕಾರ್ಯಗತಗೊಳಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ. ಈ ಯೋಜನೆಯು 2022 ರ ವೇಳೆಗೆ ಪೂರ್ಣಗೊಳ್ಳುತ್ತದೆ ಮತ್ತು ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾರಿಗೆ ಸುಲಭವಾಗುತ್ತದೆ” ಎಂದು ಗೋಯಲ್ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

Leave A Reply