ತಾಲೂಕಿನಲ್ಲಿ ವಾರಕ್ಕೊಂದು ದೇವಾಲಯ ತೆರವುಗೊಳಿಸಬೇಕು| ಸರಕಾರದಿಂದಲೇ ಜಿಲ್ಲಾಧಿಕಾರಿಗಳಿಗೆ ಆದೇಶ

ಅನಧಿಕೃತ ಎಂದು ಹೇಳಲಾಗಿರುವ ದೇವಸ್ಥಾನ,ಚರ್ಚ್,ಮಸೀದಿಗಳ ತೆರವಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್​ ಅವರೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎಂಬ ದಾಖಲೆ ಮಾಧ್ಯಮಗಳಿಗೆ ದೊರೆತಿದೆ.


Ad Widget

ಈ ಆದೇಶದ ಪ್ರಕಾರ ತಾಲೂಕಿನಲ್ಲಿ ವಾರಕ್ಕೆ ಕನಿಷ್ಟ 1 ದೇಗುಲ ತೆರವು ಮಾಡಬೇಕು, ನಗರಗಳಲ್ಲಿ ಪ್ರತಿ ವಿಭಾಗಕ್ಕೆ ವಾರಕ್ಕೊಂದು ದೇಗುಲ ತೆರವು ಗೊಳಿಸಬೇಕು ಎಂದು ಆದೇಶಿಲಾಗಿದ್ದು, ಜುಲೈ 15ರಿಂದಲೇ ತೆರವು ಕಾರ್ಯ ಆರಂಭ ಮಾಡಬೇಕು, ಪ್ರತಿ ತಿಂಗಳು ಗೃಹ ಇಲಾಖೆಗೆ ತೆರವಿನ ರಿಪೋರ್ಟ್​ ನೀಡಬೇಕು ಎಂದು ಎಲ್ಲಾ ಡಿಸಿಗಳಿಗೆ ಖುದ್ದು ಮುಖ್ಯ ಕಾರ್ಯದರ್ಶಿ ರವಿಕುಮಾರ್​ ಆದೇಶಿಸಿದ್ದು, ಪ್ರಕರಣದ ತೀವ್ರತೆ ಬಿಸಿ ಮುಟ್ಟಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿದೆ.

error: Content is protected !!
Scroll to Top
%d bloggers like this: