ಲೀಸ್‌ಗೆ ಜಾಗ ನೀಡುವುದಾಗಿ 55 ಲಕ್ಷ ರೂ ಪಡೆದು ವಂಚನೆ | ಸುಳ್ಯ ಅರಂಬೂರಿನ ಅನ್ವರ್ ಕೇರಳ ಪೊಲೀಸರ ವಶಕ್ಕೆ

ಲೀಸ್‌ಗೆ ಜಾಗವನ್ನು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಸುಳ್ಯದ ಅರಂಬೂರು ಕಲ್ಬರ್ಪೆ ನಿವಾಸಿ ಅನ್ವರ್ ಎಂಬಾತನನ್ನು ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅನ್ವರ್ ಎಂಬಾತ ಸುಳ್ಯದಲ್ಲಿ 750 ಎಕರೆ ಜಾಗವನ್ನು ಲೀಸ್‌ಗೆ ನೀಡುವುದಾಗಿ ಹೇಳಿ 2010ನೇ ಇಸವಿಯಲ್ಲಿ 55 ಲಕ್ಷ ರೂಪಾಯಿಗಳನ್ನು ರಾಜೀವನ್, ಹಾಗೂ ಶ್ರೀಧರನ್ ಎಂಬವರಿಂದ ಪಡೆದು ನಂತರ ತಮ್ಮ ದೂರವಾಣಿ ಸಂಖ್ಯೆಯನ್ನು ಸ್ವಿಚ್ ಆಫ್ ಗೊಳಿಸಿ ತಲೆಮರೆಸಿಕೊಂಡಿದ್ದರು ಎಂದು ಕಾನತ್ತೂರಿನ ರಾಜೇಶನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಆದೂರು ಎಸ್‌ಐಟಿ ನಾರ್ ಕೋರ್ಟ್ ಪೊಲೀಸರು ಅನ್ವರ್ ಸುಳ್ಯದಲ್ಲಿರುವ ಮಾಹಿತಿ ಪಡೆದುಕೊಂಡು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: