ಉದನೆ : ಗಣಪತಿ ಕಟ್ಟೆಗೆ ಹಾನಿ ಪ್ರಕರಣ ಓರ್ವ ವಶಕ್ಕೆ
ಕಡಬ : ಕಡಬ ತಾಲೂಕಿನ ಉದನೆಯಲ್ಲಿ ತಡ ರಾತ್ರಿ ಯಾರೋ ಕಿಡಿಗೇಡಿಗಳು ಗಣಪತಿ ಕಟ್ಟೆಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದನೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯು 19 ನೇ ವರ್ಷದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಸೂಚನೆಯಂತೆ ನಡೆಸಿದ್ದರು.ಸರಳವಾಗಿ
ಗಣಪತಿ ಮೂರ್ತಿಯ ವಿಸರ್ಜನೆಯನ್ನು ಮಾಡಿದ್ದರು.ಬಳಿಕ ರಾತ್ರಿ 11 ರ ವರೆಗೂ ಸಮಿತಿಯ ತಂಡ ಗಣಪತಿ ಕಟ್ಟೆಯ
ಬಳಿ ಕೆಲಸ ಮಾಡುತ್ತಿದ್ದರು.ಬಳಿಕ ಕಿಡಿಗೇಡಿಗಳು ಕಟ್ಟೆಗೆ ಹಾನಿ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
ಕಡಬ ತಾಲೂಕು ಕೊಣಾಜೆ ಗ್ರಾಮದ ಉದನೆ ಗೆ ಬೇಟಿ ನೀಡಿ ಮಹಜರು ತಯಾರಿಸಿ 50 ರೂ ನೋಟಿನ ತುಣುಕುಗಳು ಬಿದ್ದುಕೊಂಡಿದ್ದು ಅದನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿ ಪತ್ತೆ ಬಗ್ಗೆ ವಿಶೇಷ ಕರ್ತವ್ಯದಲ್ಲಿ ನೇಮಿಸಿ ಕಳುಹಿಸಿದ ಮೇರೆಗೆ ಹೆಚ್ ಸಿ 838 ಹಿತೋಷ್ ಕುಮಾರ್, ಪಿಸಿ 2509, ಯೋಗರಾಜ್ ಎಂಬವರು ದಿನಾಂಕ 11-09-2021ರಂದು 18.30 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡೊಳೆ ಎಂಬಲ್ಲಿ ಇದ್ದ ಆರೋಪಿಯನ್ನು ಪತ್ತೆ ಮಾಡಿ 19.00 ಗಂಟೆಗೆ ಠಾಣೆಗೆ ಹಾಜರುಪಡಿಸಿದಾತನನ್ನು ವಿಚಾರಿಸಲಾಗಿ ಆತನ ಹೆಸರು ರವೀಂದ್ರ ಕುಮಾರ್ ಪ್ರಾಯ 25 ವರ್ಷ, ತಂದೆ: ಸುಬೀಂದರ್, ವಾಸ: ಗರ್ನಿಯಾ, ಸುದಾಮ್ ಗೋಪಾಲ್ ಪುರ್ ತಾಲೂಕು, ಬಾಗಲ್ ಪುರ್ ಜಿಲ್ಲೆ, ಬಿಹಾರ್ ರಾಜ್ಯ ಎಂಬುದಾಗಿ ತಿಳಿಸಿದಾತನನ್ನು ಆತನ ಬರ್ಮುಡ ಚಡ್ಡಿಯಲ್ಲಿ 50 ರೂ ಮುಖ ಬೆಲೆಯ ಹರಿದ ತುಣುಕುಗಳು ದೊರೆತಿದ್ದು, ಅಲ್ಲದೇ ಇದೇ ಆರೋಪಿಯು ಉದನೆ ಪೇಟೆಯಲ್ಲ ಅಟೋರಿಕ್ಷಾ ಚಾಲಕನೊನ್ನಬ್ಬಗೆ ಕಲ್ಲು ಎಸೆದ ಬಗ್ಗೆ ಮಾಹಿತಿ ಕಲೆಹಾಕಿ ರಿಕ್ಷಾ ಚಾಲಕ ವಿಕ್ರಮ್ ಎಂಬವರ ಹೇಳಿಕೆ ಪಡೆದಿದ್ದು ಈ ಆದಾರದಲ್ಲಿ ಸದ್ರಿಯಾತನನ್ನು 19.30 ಗಂಟೆಗೆ ದಸ್ತಗಿರಿ ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ರಿಮಾಂಡ್ ವರದಿಯೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ಸದ್ರಿ ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿರುತ್ತದೆ.