ಮತ್ತೆ ಮುಂಬೈನಲ್ಲಿ ನಿರ್ಭಯಾ ಮಾದರಿ ರೇಪ್ | ಮರ್ಮಾಂಗಕ್ಕೆ ರಾಡ್ ನಿಂದ ಹಲ್ಲೆ ಮಾಡಿದ ಪೈಶಾಚಿಕ ವ್ಯಕ್ತಿಯ ಬಂಧನ !

ಮತ್ತೆ ನಿರ್ಭಯ ಮಾದರಿಯ ಪೈಶಾಚಿಕ ಕೃತ್ಯ ಮುಂಬೈಯಲ್ಲಿ ನಡೆದಿದೆ. ಮುಂಬಯಿಯ ಹೊರವಲಯದ ಸಾಕಿನಾಕ ಎಂಬಲ್ಲಿ ನಿಂತಿದ್ದ ಟೆಂಪೋ ಒಂದರಲ್ಲಿ ಮಹಿಳೆಯೊಬ್ಬಳ ನಡೆದಿದ್ದು ಆಕೆಯ ಮರ್ಮಾಂಗ ಗಳಿಗೆ ಕಬ್ಬಿಣದ ರಾಡುಗಳಿಂದ ಆಕ್ರಮಣ ನಡೆಸಲಾಗಿದೆ.

ಶುಕ್ರವಾರ ಇಳಿ ಮುಂಜಾನೆ ಹೊತ್ತು ಪೊಲೀಸ್ ಕಂಟ್ರೋಲ್ ರೂಮಿಗೆ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು ಟೆಂಪೋ ಒಂದರಲ್ಲಿ ಥಳಿಸುತ್ತಿರುವುದಾಗಿ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲಿ ಮಹಿಳೆಯು ರಕ್ತದೋಕುಳಿಯಲ್ಲಿ ಮಿಂದು ಮಲಗಿದ್ದು ಕಾಣಿಸಿತ್ತು.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 45 ವರ್ಷ ವಯಸ್ಸಿನ ಮೋಹನ್ ಚೌಹಾನ್ ಎಂಬವರನ್ನು ಬಂಧಿಸಿದ್ದಾರೆ. ಆತ 34 ವರ್ಷ ವಯಸ್ಸಿನ ಆ ಮಹಿಳೆಯನ್ನು ರೇಪ್ ಮಾಡಿ ನಂತರ ಗುಪ್ತಾಂಗ ಗಳಿಗೆ ಕಬ್ಬಿಣದ ರಾಡು ನಿಂದ ಹಲ್ಲೆ ನಡೆಸಿದ್ದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.
ಇದೀಗ ಮಹಿಳೆಯ ಪರಿಸ್ಥಿತಿಯು ಚಿಂತಾಜನಕವಾಗಿದ್ದು ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಪೈಶಾಚಿಕ ಕೃತ್ಯಕ್ಕೆ ಇಡೀ ಮುಂಬೈ ಆಕ್ರೋಶಗೊಂಡಿದೆ.


Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: