ರಾತ್ರಿ ಬೆಳಗಾಗಬೇಕಾದರೆ ಅಲ್ಲಿ ಬಿದ್ದಿತ್ತು ರಾಶಿ ರಾಶಿ ಕಾಂಡೋಮ್!!ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಕಾಂಡೋಮ್ ಪತ್ತೆಯಾಗಲು ಕಾರಣ ನಿಗೂಢ

Share the Article

ಕೆಲವು ನಿರ್ಜನ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಕಟ್ಟಗಳು, ಜನವಸತಿ ಇಲ್ಲದ ಪ್ರದೇಶಗಳು ಸೇರಿದಂತೆ ಹಲವು ಜಾಗಗಳು ಇತ್ತೀಚೆಗೆ ಅಕ್ರಮಗಳ ತಾಣವಾಗುತ್ತಿವೆ. ಕುಡುಕರು, ಪಾರ್ಟಿ ಮಾಡುವವರು, ಅಪರಾಧ ಕೃತ್ಯ ನಡೆಸುವವರನ್ನು ಈ ಜಾಗವನ್ನು ಹುಡುಕಿಕೊಂಡು ಹೊರಟರೆ, ಈಗೀಗ ಪ್ರೇಮಿಗಳಿಗೂ ಇಂಥಹ ಸ್ಥಳಗಳೇ ಬೇಕು. ಆದ್ದರಿಂದ ಮದ್ಯದ ಬಾಟಲಿಗಳ ಜೊತೆಯಲ್ಲಿ ಕಾಂಡೋಮ್‌ಗಳು ಇಂಥ ಪ್ರದೇಶಗಳಲ್ಲಿ ಪತ್ತೆಯಾಗುವುದು ಮಾಮೂಲಿಯಾಗಿವೆ.

ಇದೀಗ ತುಮಕೂರು ಜನತೆಯನ್ನು ಅಂತದ್ದೇ ಮಾದರಿಯ ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ. ಅದೇನೆಂದರೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿ ಜನರನ್ನು ದಿಗ್ಭ್ರಮೆಗೊಳಿಸಿದೆ.

ನಿನ್ನೆ ಮಧ್ಯರಾತ್ರಿಯಿಂದ ಇಂದು ನಸುಕಿನ ಅವಧಿಯ ಮಧ್ಯೆ ಇದನ್ನು ಯಾರೋ ತಂದು ಸುರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ. ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ-ಬಟವಾಡಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಇವುಗಳು ಕಂಡುಬಂದಿವೆ.

ಕಿಲೋಮೀಟರ್‌ಗಟ್ಟಲೆ ಈ ಕಾಂಡೋಮ್‌ಗಳು ಬೇಕಂತಲೇ ಯಾರೋ ಬಂದು ಎಸೆದು ಹೋಗಿದ್ದಾರಾ? ಅಥವಾ ಕಂಪನಿಗಳ ವತಿಯಿಂದ ಸಾಗಣೆ ಮಾಡುವಾಗ ವಾಹನಗಳಿಂದ ಅಚಾನಕ್ಕಾಗಿ ಬಿದ್ದುಹೋಗಿವೆಯೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದನ್ನು ನೋಡಿದರೆ ಯಾರೋ ಎಸೆದು ಹೋಗಿದ್ದಾರೆ ಎಂದೇ ಹೇಳಬಹುದು. ಈ ಬಗ್ಗೆ ತನಿಖೆ ನಡೆಸಿದ ಬಳಿಕ ವಿವರ ತಿಳಿಯಬೇಕಿದೆ.

Leave A Reply