ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ | ಬೈಕ್ ನಿಂದಲೇ ಹಿಡಿದೆಳೆದು ಗಾಯಗೊಳಿಸಿದ ತೃತೀಯ ಲಿಂಗಿಗಳು !!

ಸ್ಯಾಂಡಲ್ ವುಡ್ ನ ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರು ದಾಳಿ ಮಾಡಿರುವ ಘಟನೆ ಹೆಬ್ಬಾಳದ ಫ್ಲೈ ಓವರ್ ಬಳಿ ನಡೆದಿದೆ.

 

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ನಿನ್ನೆ ರಾತ್ರಿ ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ​​ ಗಾಡಿಯಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹೆಬ್ಬಾಳ ಫ್ಲೈಓವರ್ ಬಳಿ ಮಂಗಳಮುಖಿಯರು ತಡೆದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು,ಬೈಕ್​​ಗೂ ಡ್ಯಾಮೇಜ್ ಆಗಿದೆ.

ಈ ವೇಳೆ ಬೈಕ್ ಸ್ಥಳದಲ್ಲೇ ಬಿಟ್ಟು ಹೋಗಿದ್ದ ರಕ್ಷಕ್ ಕೊನೆಗೆ ಹೆಬ್ಬಾಳ ಪೊಲೀಸರ ನೆರವಿನಲ್ಲಿ ಬೈಕ್ ಪಡೆದು ಮನೆಗೆ ತೆರಳಿದ್ದಾರೆ.ಈ ಪ್ರಕರಣ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

1 Comment
  1. sklep internetowy says

    Wow, awesome blog structure! How long have you ever been running a blog for?

    you made blogging look easy. The whole look of your web site is wonderful,
    let alone the content! You can see similar here e-commerce

Leave A Reply

Your email address will not be published.