ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಮಾಡುವುದು ಆರೋಗ್ಯಕ್ಕೆ ಒಳಿತೇ-ಕೆಡುಕೇ!!?? | ನಿಮಗೂ ಪ್ರೆಶರ್ ಕುಕ್ಕರನ್ನು ಆರೋಗ್ಯದ ದೃಷ್ಟಿಯಿಂದ ಬಳಸಲು ಭಯವೇ ಅಥವಾ ಅನುಮಾನವೇ!!!?
ಹಿಂದೆಲ್ಲಾ ಅಡುಗೆ ಮಾಡುವುದೆಂದರೆ ಇದ್ದಿಲು, ಕಟ್ಟಿಗೆ ಒಲೆ ಬಳಸುವುದೇ ಸಾಮಾನ್ಯವಾಗಿತ್ತು. ಆದರೆ, ಕಾಲ ಬದಲಾಗುತ್ತಾ ಹೋದಂತೆ ಹೊಸ ಹೊಸ ತಂತ್ರಜ್ಞಾನಗಳು ತೆರೆದುಕೊಂಡು ಆಧುನಿಕತೆಗೆ ಒಗ್ಗಿಕೊಂಡ ಕಾರಣ ಈಗ ಕಟ್ಟಿಗೆ ಒಲೆ ಬಲು ಅಪರೂಪ ಎಂಬಂತಾಗಿದೆ.
ಈಗೆಲ್ಲಾ ಅಡುಗೆ ಮನೆಗಳಲ್ಲಿ ಎಲ್ಪಿಜಿ, ಸೋಲಾರ್ ಸ್ಟೌವ್, ಎಲೆಕ್ಟ್ರಿಕ್ ಸ್ಟೌವ್ಗಳದ್ದೇ ದರ್ಬಾರ್ ಶುರುವಾಗಿದೆ. ಇದೆಲ್ಲದರ ಜೊತೆ ಕುಕ್ಕರ್ ಕೂಡಾ ಸಾಮಾನ್ಯವಾಗಿ ಹೋಗಿರುವುದರಿಂದ ಅಡುಗೆಯ ಶೈಲಿಯೂ ಬದಲಾಗಿದೆ. ಪ್ರೆಶರ್ ಕುಕ್ಕರ್ ಈಗ ಬಹುತೇಕ ಎಲ್ಲರ ಮನೆಯಲ್ಲೂ ಲಭ್ಯವಿದೆ. ಕೆಲವರು ಅದನ್ನು ತುರ್ತು ಸಂದರ್ಭಕ್ಕೆ ಬಳಸಿಕೊಂಡರೆ ಹೆಚ್ಚಿನವರು ನಿತ್ಯ ಬಳಸುತ್ತಾರೆ. ಅನ್ನ ಮಾಡುವುದಕ್ಕೆ ಬೇಕೇ ಬೇಕು ಎಂಬಂತಾಗಿರುವ ಈ ಪ್ರೆಶರ್ ಕುಕ್ಕರ್ ಬಗ್ಗೆ ಕೆಲವು ಮಾಹಿತಿ ಇಲ್ಲಿ ಲಭ್ಯವಿದೆ.
ಪ್ರೆಶರ್ ಕುಕ್ಕರ್ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಅಭಿಪ್ರಾಯವಿದೆ. ಕೆಲವರು ಇಂದಿಗೂ ಅವುಗಳನ್ನು ಅನುಮಾನಿಸಲು ಕಾರಣ ಅದು ಎಷ್ಟು ಸುರಕ್ಷಿತ ಎಂಬ ಗೊಂದಲ. ಆದರೆ, ಇಂದು ಮಾರುಕಟ್ಟೆಯಲ್ಲಿ ಆ ಗೊಂದಲವನ್ನು ಪರಿಹರಿಸಲೆಂದೇ ಸಾಕಷ್ಟು ಅತ್ಯಾಧುನಿಕ ಮಾದರಿಯ ಕುಕ್ಕರ್ಗಳು ಬಂದಿವೆ. ಇನ್ನು ಕೆಲವರು ಕುಕ್ಕರ್ ಬಗ್ಗೆ ಅನುಮಾನ ತಾಳಲು ಕಾರಣ ಅದರಿಂದ ಆರೋಗ್ಯಕ್ಕೆ ಏನಾದರೂ ಹಾನಿಯಾಗಬಹುದೇ ಎಂಬುದು. ಆ ಅನುಮಾನ ನಿಮ್ಮಲ್ಲೂ ಇದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ.
*ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದರೆ, ಅದು ಹೆಚ್ಚು ಸತ್ವವನ್ನು ಉಳಿಸಿಕೊಳ್ಳುತ್ತದೆ. ಇದರಿಂದ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಿನಿಂದ ದೂರವಿರಿಸುತ್ತದೆ. ಈ ಕಾರಣದಿಂದ ಹಸಿವು ಕಡಿಮೆಯಾಗುತ್ತದೆ.
*ಅಕ್ಕಿಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅಥವಾ ರೈಸ್ ಕುಕ್ಕರ್ ಬಳಸಿದರೆ ಅದರಲ್ಲಿರುವ ಪೋಷಕಾಂಶಗಳು ಅನ್ನದಲ್ಲಿ ಉಳಿಯುತ್ತದೆ. ಅಕ್ಕಿಯನ್ನು ಹಾಗೆಯೇ ಕುದಿಸಿ ಅದರಲ್ಲಿರುವ ನೀರು ತೆಗೆದಾಗ ಪೋಷಕಾಂಶಗಳು ಹೋಗುತ್ತವೆ.
*ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದಾಗ, ಅಕ್ಕಿ ಹೆಚ್ಚಾಗಿ ಕುದಿಯುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೊರೆ ಕಡಿಮೆಯಾಗುತ್ತದೆ.
*ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹೆಚ್ಚಿನ ಶಾಖ ಮತ್ತು ಅಧಿಕ ಒತ್ತಡದೊಂದಿಗೆ ಬೇಯಿಸಿದಾಗ ಅದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇರುವುದಿಲ್ಲ, ಅವುಗಳನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ.
*ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದಾಗ ಕೆಲಸ ವೇಗವಾಗಿ ಪೂರ್ಣಗೊಳ್ಳುತ್ತದೆ. ಹಾಗೆಯೇ ಗ್ಯಾಸ್ ಹೆಚ್ಚು ವ್ಯರ್ಥವಾಗುವುದಿಲ್ಲ. ಇದು ನಿಮಗೆ ಸಮಯ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ.
ಈ ಎಲ್ಲಾ ಅಂಶಗಳಿಂದ ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಬೇಯಿಸುವುದು ಉಪಕಾರಿಯಾಗಿದೆ. ಇನ್ನು ನಿಮ್ಮಲ್ಲಿ ಪ್ರೆಶರ್ ಕುಕ್ಕರ್ ಬಗ್ಗೆ ಇರುವ ಅನುಮಾನ ದೂರವಾಗಿದೆ ಎಂದುಕೊಳ್ಳುತ್ತೇವೆ. ತುಂಬಾ ಉಪಕಾರಿ ಆಗಿರುವ ಪ್ರೆಶರ್ ಕುಕ್ಕರನ್ನು ಮನೆಯಲ್ಲಿ ಬಳಸಿ, ರುಚಿ ರುಚಿಯಾದ ಅಡುಗೆ ತಯಾರಿಸಿ, ಆರೋಗ್ಯದಿಂದಿರಿ ಎಂಬುದು ಆಶಯ.