ದೇವರ ಹೆಸರಿನಲ್ಲಿ ಕೊಳ್ಳೆ ಹೊಡೆಯುವವರಿಗೆ ಬಿಸಿಮುಟ್ಟಿಸಿದ ಕೋರ್ಟ್!!ಇನ್ನು ಮುಂದೆ ದೇವಾಲಯದ ಅಧೀನಕ್ಕೆ ಬರುವ ಜಾಗಕ್ಕೆ ದೇವರೇ ಮಾಲೀಕ !!

ದೇವಾಲಯದ ಅಧೀನಕ್ಕೆ ಬರುವಂತಹ ಭೂಮಿಯ ಮಾಲೀಕನಾಗಲು, ಹಾಗೂ ದಾಖಲೆಗಳಲ್ಲಿ ಹೆಸರು ಉಲ್ಲೇಖಸಲು ದೇವರ ಹೆಸರು ಮಾತ್ರ ಅರ್ಹವಾಗಿದ್ದು,ದೇವಾಲಯದ ಅರ್ಚಕರಿಗೆ ಭೂಮಿಯ ಯಾವುದೇ ಹಕ್ಕು ಇರುವುದಿಲ್ಲ ಹಾಗೂ ಅರ್ಚಕ ಅಲ್ಲಿ ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ ಎಂದು ಸೋಮವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪೋಂದನ್ನು ಪ್ರಕಟಿಸಿದೆ.ಈ ಮೂಲಕ ದೇವರ ಹೆಸರಿನಲ್ಲಿ ಜೇಬು ತುಂಬುಸಿಕೊಳ್ಳುತ್ತಿದ್ದ ಅನೇಕರಿಗೆ ಬಿಸಿಮುಟ್ಟಿದಂತಾಗಿದೆ.

ದೇವರೇ, ಭೂಮಿಯ ಮಾಲೀಕನಾಗಿರುವುದರಿಂದ ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ. ಹೀಗಾಗಿ ಭೂ ದಾಖಲೆಗಳಲ್ಲಿ ಪೂಜಾರಿ ಅಥವಾ ವ್ಯವಸ್ಥಾಪಕರ ಹೆಸರನ್ನು ಉಲ್ಲೇಖಿಸಲೇಬೇಕು ಎಂಬ ಅಗತ್ಯವಿಲ್ಲ. ದೇವರೇ ಭೂಮಿಯ ಸ್ವಾಮ್ಯ ಹೊಂದಿರುವುದರಿಂದ ದೇವರ ಸೇವಕರಾಗಿರುವವರು ಅಥವಾ ವ್ಯವಸ್ಥಾಪಕರು ಅದನ್ನು ಅನುಭೋಗಿಸುತ್ತಾರೆ ಅಷ್ಟೇ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಎ ಎಸ್ ಬೋಪಣ್ಣ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಮಧ್ಯಪ್ರದೇಶ ಕಂದಾಯ ಕಾನೂನು ಸಂಹಿತೆ 1959ರ ಅಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು.

ಕಾನೂನುಬಾಹಿರವಾಗಿ ಪೂಜಾರಿಗಳು ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಭೂ ದಾಖಲೆಯಲ್ಲಿ ಪೂಜಾರಿಗಳ ಹೆಸರನ್ನು ತೆಗೆದು ಹಾಕುವ ಸಂಬಂಧ ಸರ್ಕಾರವು ಕಾರ್ಯಕಾರಿ ಸೂಚನೆಗಳನ್ನು ಒಳಗೊಂಡ ಸುತ್ತೋಲೆ ಹೊರಡಿಸಿತ್ತು.

Leave A Reply

Your email address will not be published.