ನಿಫಾ ವೈರಸ್ ಗೆ ಬೆಚ್ಚಿಬಿದ್ದ ಕೇರಳ | ಈ ಮಹಾಮಾರಿಗೆ 12 ವರ್ಷದ ಬಾಲಕ ಬಲಿ

ಕೊರೋನ ಎಂಬ ಸೋಂಕಿನಿಂದ ಈಗಾಗಲೇ ದಣಿದ ಜನತೆಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಇದೀಗ ಹೊಸದಾದ ನಿಫಾ ವೈರಸ್ ಕೇರಳದಲ್ಲಿ ಕಂಡು ಬಂದಿದ್ದು ಅಷ್ಟೇ ಅಲ್ಲದೇ,12 ವರ್ಷದ ಬಾಲಕನ ಪ್ರಾಣವನ್ನೇ ತೆಗೆದಿದೆ.

ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್​​ನಿಂದ 12 ವರ್ಷದ ಬಾಲಕ ಭಾನುವಾರ ಮುಂಜಾನೆ ಮೃತಪಟ್ಟಿದ್ದಾನೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶನಿವಾರ ಆತನ ಸ್ಥಿತಿ ಹದಗೆಟ್ಟಿತ್ತು. ಭಾನುವಾರ ಬೆಳಿಗ್ಗೆ 5 ಗಂಟೆಗೆ ಬಾಲಕ ಮೃತಪಟ್ಟಿದ್ದಾನೆ.

ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ. ಸೆಪ್ಟೆಂಬರ್ 3 ರಂದು ಬಾಲಕನಿಗೆ ನಿಫಾ ವೈರಸ್ ಇರುವುದಾಗಿ ಶಂಕೆ ವ್ಯಕ್ತವಾಗಿತ್ತು. ಆತನಲ್ಲಿ ಎನ್ಸೆಫಾಲಿಟಿಸ್ ಮತ್ತು ಮಯೋಕಾರ್ಡಿಟಿಸ್ ಲಕ್ಷಣಗಳು ಕಾಣಿಸಿತ್ತು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಕೇರಳದ ಸ್ಯಾಂಪಲ್ ಪರೀಕ್ಷಿಸಿ ಪಾಸಿಟಿವ್ ಎಂದು ದೃಢಡಿಸಿದೆ.

12 ವರ್ಷದ ಬಾಲಕನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ವೈದ್ಯಕೀಯ ಕಾಲೇಜಿಗೆ ಕರೆತಂದು ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ವೀಣಾ ಚಾರ್ಜ್ ಕೋಯಿಕ್ಕೋಡ್​​ಗೆ ಭೇಟಿ ನೀಡಲಿದ್ದು , ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲೆಯ ಸಚಿವರೊಂದಿಗೆ ಸಭೆ ನಡೆಸಿದ್ದೇವೆ. ಪರಿಸ್ಥಿತಿಯನ್ನು ನಿಭಾಯಿಸಲು ತಂಡಗಳನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಇತರ ಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ನಾವು ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಆರೋಗ್ಯ ಸಚಿವರು ಕೋಯಿಕ್ಕೋಡ್‌ಗೆ ಭೇಟಿ ನೀಡಲಿದ್ದು,ಆಕೆಯೊಂದಿಗೆ ಕೇರಳ ಸಚಿವ ಪಿಎ ಮೊಹಮ್ಮದ್ ರಿಯಾಸ್ ಇರಲಿದ್ದಾರೆ.

ಈಗಿನಂತೆ, ಭಯಪಡುವ ಅಗತ್ಯವಿಲ್ಲ, ಆದರೆ ನಾವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಕುಟುಂಬದಿಂದ ಅಥವಾ ಇತರ ಸಂಪರ್ಕಗಳಿಂದ ಯಾರಿಗೂ ಯಾವುದೇ ರೋಗಲಕ್ಷಣಗಳಿಲ್ಲ ಎಂದು ವೀಣಾ ಜಾರ್ಜ್ ಹೇಳಿದರು.

ಕೇಂದ್ರ ಸರ್ಕಾರವು ತಾಂತ್ರಿಕ ಬೆಂಬಲವನ್ನು ಒದಗಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ತಂಡವನ್ನು ಕೇರಳಕ್ಕೆ ರವಾನಿಸಿದೆ. ತಂಡವು ಭಾನುವಾರ ತಲುಪಲಿದೆ.

ಏನಿದು ನಿಫಾ ವೈರಸ್!!??

ಈ ಪ್ರಶ್ನೆ ನಿಮಗೆಲ್ಲರಿಗೂ ಕಾಡಿರಬಹುದು.ಹೌದು ನಿಫಾ ಜೂನಾಟಿಕ್ ವೈರಸ್ ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಿಫಾ ವೈರಸ್ ಬಾವಲಿಗಳ ಜೊಲ್ಲಿನಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುತ್ತದೆ. ಸಾಮಾನ್ಯವಾಗಿ ಇದು ಹಂದಿಗಳು, ನಾಯಿಗಳು, ಕುದುರೆಗಳಂತಹ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಮಾನವರಲ್ಲಿ ಹರಡಿದರೆ, ನಿಫಾ ವೈರಸ್ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು ಅದು ಸಾವಿಗೆ ಕಾರಣವಾಗಬಹುದು.

ಪ್ರಕರಣದ ವಿವರಗಳನ್ನು ನೀಡಿದ ಸಚಿವರು ವರದಿಗಾರರಿಗೆ ಹೇಳಿದರು, ‘ದುರದೃಷ್ಟವಶಾತ್, ಹುಡುಗ ಬೆಳಿಗ್ಗೆ 5 ಗಂಟೆಗೆ ನಿಧನರಾದರು. ಶನಿವಾರ ರಾತ್ರಿ ಮಗುವಿನ ಸ್ಥಿತಿ ಗಂಭೀರವಾಗಿದೆ. ನಾವು ವಿವಿಧ ತಂಡಗಳನ್ನು ರಚಿಸಿದ್ದೇವೆ ಮತ್ತು ಪತ್ತೆಹಚ್ಚುವಕಾರ್ಯ ಆರಂಭಿಸಿದ್ದೇವೆ. ಹುಡುಗನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.

Leave A Reply

Your email address will not be published.