ವಿಟ್ಲ :ಅಪ್ರಾಪ್ತ ಬಾಲಕಿಯ ಕಿಡ್ನಾಪ್ ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿ ಶಮೀರ್ ವಿರುದ್ಧ ದೂರು ದಾಖಲು|ಹಲವು ಬಾರಿ ಹುಡುಗಿಯರನ್ನು ಚುಡಾಯಿಸಿ ಒದೆ ತಿಂದಿದ್ದ ಶಮೀರನ ಬಂಧನಕ್ಕೆ ಕ್ಷಣಗಣನೆ

Share the Article

ವಿಟ್ಲ : ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಿಡ್ನಾಪ್ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣದ ಸಂಬಂಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ವ್ಯಕ್ತಿಯನ್ನು ಕೋಲ್ಪೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಶಮೀರ್ ಎಂದು ಗುರುತಿಸಲಾಗಿದೆ.

ಘಟನೆ ವಿವರ :ಆರೋಪಿ ಶಮೀರ್ ನವವಿವಾಹಿತನಾಗಿದ್ದು, ತನ್ನ ಎಳೆವಯಸ್ಸಲ್ಲೇ ಹೆತ್ತವರ ವಿರೋಧದ ನಡುವೆಯೂ ಸ್ಥಳೀಯ ಯುವತಿಯನ್ನು ವಿವಾಹವಾಗಿದ್ದ. ಆ ಬಳಿಕ ಆಕೆಯನ್ನು ಕೈಬಿಟ್ಟ ಶಮೀರ್ ಆಕೆಗೆ ಬೇರೆ ಯುವಕನ ಜೊತೆ ವಿವಾಹ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಕಳೆದ ಬಾರಿ ಶಾಲಾ ಬಾಲಕಿಯೋರ್ವಳನ್ನು ಚೂಡಾಯಿಸಿದ ಈತ ಪುತ್ತೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಸರಿಯಾಗಿ ಬೆನ್ನು ಪುಡಿಮಾಡಿಸಿಕೊಂಡಿದ್ದ. ಸದ್ಯ ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ ಈತ ತನ್ನದೇ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ನಡೆಸಿದ್ದಾನೆ.

ನಿನ್ನೆ ಮಧ್ಯಾಹ್ನ ತನ್ನ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಿಡ್ನಾಪ್ ನಡೆಸಿದ್ದಾನೆ ಎಂದು ಬಾಲಕಿಯ ಪೋಷಕರು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಅದರಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply