ಬೆಂಗಳೂರಿನಿಂದ ಬೆಳಕಿಗೆ ಬರುತ್ತಿದೆ ಲೆಕ್ಕವಿಲ್ಲದಷ್ಟು ಅತ್ಯಾಚಾರ ಪ್ರಕರಣ!? ವಿದೇಶದಿಂದ ಉದ್ಯೋಗ ಅರಸಿ ಬಂದಿದ್ದ ನೈಜೀರಿಯಾ ಪ್ರಜೆಗಳಿಂದ ನಡೆಯಿತು ಯುವತಿಯ ಅತ್ಯಾಚಾರ|

ಬೆಂಗಳೂರು:ಅತ್ಯಾಚಾರ, ಕೊಲೆ, ದರೋಡೆ ಇತ್ತೀಚೆಗೆ ಲೆಕ್ಕವೇ ಸಿಗದಷ್ಟು ನಡೆಯುತ್ತಿದ್ದು ಅದರಲ್ಲೂ ಬೆಂಗಳೂರು ಇದಕ್ಕೆ ಹೇಳಿ ಮಾಡಿಸಿದ ಸ್ಥಳದಂತಾಗಿದೆ.

ಉದ್ಯೋಗಕ್ಕೆ ಎಂದು ಸಾಲು ಸಾಲು ವಿದೇಶಿಗರು ಸಿಲಿಕಾನ್ ಸಿಟಿಯನ್ನು ಪ್ರವೇಶಿಸುತ್ತಿದ್ದಾರೆ. ಇದೀಗ ಇಂತಹ ಜನರಿಂದಲೇ ಬೆಂಗಳೂರು ಎಚ್ಚರಿಕೆ ವಹಿಸಬೇಕಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇದೀಗ ಬೆಂಗಳೂರಿನಲ್ಲಿ ನೆಲೆ ಇದ್ದ ಇಬ್ಬರು ನೈಜೀರಿಯಾ ಪ್ರಜೆಗಳು,ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು,ಈ ಸಂಬಂಧವಾಗಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಎಸಗಿದ ಆರೋಪಿಗಳಾದ ಆ್ಯಂಟೋನಿ (35) ಮತ್ತು ಒಬಾಕಾನನ್ನು (36) ಬಾಣಸವಾಡಿ ಪೊಲೀಸರು ಸೆರೆ ಹಿಡಿದಿದ್ದಾರೆ.

ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟವೇರ್ ಉದ್ಯೋಗಿಯಾಗಿರುವ 29 ವರ್ಷದ ಸಂತ್ರಸ್ತ ಯುವತಿಗೆ ಆರೋಪಿ ಆ್ಯಂಟೋನಿ ಹಲವು ವರ್ಷಗಳಿಂದ ಪರಿಚಯವಿದ್ದು,ಕಳೆದ ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಯುವತಿಗೆ ಪರಿಚಯವಿದ್ದ ಆರೋಪಿ ಆ್ಯಂಟೋನಿ ಆಗಸ್ಟ್ 29ರಂದು ಯುವತಿಯನ್ನು ಸ್ನೇಹಿತರ ಮನೆಗೆಂದು ಕರೆದೊಯ್ದಿದ್ದ. ಬಳಿಕ ಮೂವರೂ ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿದ್ದಾಗ ಅತ್ಯಾಚಾರ ಮಾಡಿದ್ದಾಗಿ ಯುವತಿ ಆರೋಪ ಮಾಡಿದ್ದಾಳೆ.

ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ಯುವತಿಯ ದೂರಿನ ಪ್ರಕಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಬಾಣಸವಾಡಿ ಪೊಲೀಸರು ಒಳಪಡಿಸಿದ್ದಾರೆ.

error: Content is protected !!
Scroll to Top
%d bloggers like this: