ಸೆ.5ರಂದು ಶರತ್ ನೀರ್ಕಜೆ ನಿರ್ದೇಶನದ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಶರತ್ ನೀಕ೯ಜೆ ನಿದೇ೯ಶನದ ಹೊಸ ಕಿರುಚಿತ್ರ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ. ಈ ಕಿರುಚಿತ್ರದ ಹೆಸರು ಹಾಗೂ ಪೋಸ್ಟರ್ ಸೆಪ್ಟೆಂಬರ್ 5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ಬಿಡುಗಡೆಗೊಳ್ಳಲಿದೆ.

 

ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಚಿತ್ರರಂಗದ ಕಡೆ ಹೆಚ್ಚು ಒಲವನ್ನು ಇಟ್ಟುಕೊಂಡಿರುವ ಶರತ್ ಇವರು ತಾವೇ ಸ್ವತಃ ಕಥೆ ರಚಿಸಿದ್ದು, ಎಡಿಟಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಿತಿನ್ ಕಾನಾವು ಅವರ ಕೈ ಚಳಕದಲ್ಲಿ ವೀಡಿಯೋಗ್ರಾಫಿ ಹಾಗೂ ಎಡಿಟಿಂಗ್‌ನಲ್ಲಿ ಮೂಡಿ ಬಂದಿದ್ದು, ಈ ಕಿರುಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಕಲಾವಿದೆ ಸಾಯಿಶ್ರುತಿ ಪಿಲಿಕಜೆ ಮತ್ತು ಬಾಲ ಕಲಾವಿದ ಪೂರ್ವ ಗೌಡ ಕಾಣಿಸಿಕೊಳ್ಳಲಿದ್ದಾರೆ. ಹೊಸ ತಂಡ, ಹೊಸ ಕಥೆ, ಹೊಸತನದೊಂದಿಗೆ ನಿಮ್ಮ ಮುಂದೆ ಆದಷ್ಟು ಶೀಘ್ರದಲ್ಲೇ ಚಿತ್ರ ಹೊರ ಬರಲಿದೆ.

Leave A Reply

Your email address will not be published.