ಮಾಸ್ಕ್ ಧರಿಸದ ಸೈನಿಕನ ಥಳಿಸಿದ ಪೊಲೀಸರು | ಮೂವರ ಅಮಾನತು

ಮಾಸ್ಕ್ ಧರಿಸದ ಸೈನಿಕರೊಬ್ಬರಿಗೆ ಮೂವರು ಪೊಲೀಸರು ಥಳಿಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದ್ದು,ಈ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನೊಬ್ಬನನ್ನು ಪೊಲೀಸರು ಥಳಿಸಿದ್ದರು. ಜಾರ್ಖಂಡ್ ನ ಚತ್ರ ಎಂಬಲ್ಲಿ ನಡೆದಿದ್ದ ಈ ಘಟನೆಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

ವಿಡಿಯೋದಲ್ಲಿ ಪೊಲೀಸರು ಸೈನಿಕ ಪವನ್ ಕುಮಾರ್ ಯಾದವ್ ನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಬಿಗಿಯುವುದು ಕಂಡು ಬಂದಿತ್ತು.

ಪೊಲೀಸ್ ಇಲಾಖೆ ಸೈನಿಕನನ್ನು ಥಳಿಸಿದ್ದ ಮೂವರು ಪೊಲೀಸರನ್ನು ಅಮಾನತುಗೊಳಿಸಿದೆ. ಥಳಿತಕ್ಕೊಳಗಾದ ಸೈನಿಕ ಬೈಕಿನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದು, ಪೊಲೀಸರು ತಡೆದು ವಿಚಾರಣೆ ನಾಡೆಸಿದಾಗ ಆತ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಎಸ್ ಪಿ ಘಟನೆ ಕುರಿತು ವರದಿ ನೀಡಿದ್ದಾರೆ.

Leave A Reply

Your email address will not be published.