ದ.ಕ | ಜಿಲ್ಲೆಯ 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಮಂಗಳೂರು : ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಒಟ್ಟು 21 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇಲ್ಲಿನ ಸಹ ಶಿಕ್ಷಕಿ ಚೇತನಾ ಕುಮಾರಿ ಪಿ.ವಿ., ಬೆಳ್ತಂಗಡಿ ತಾಲೂಕಿನ ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಶಿವಾನಂದ ಭಂಡಾರಿ, ಮಂಗಳೂರು ಉತ್ತರ ಕ್ಷೇತ್ರದ ಬಸ್ತಿ ಗಾರ್ಡನ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸುರೇಖಾ ಕೆ., ಮಂಗಳೂರು ದಕ್ಷಿಣ ಕ್ಷೇತ್ರದ ಬಗಂಬಿಲ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪ್ರತಿಮಾ ಹೆಬ್ಬಾರ್, ಮೂಡುಬಿದಿರೆಯ ಪೆಂಚಾರು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅರ್ಚನಾ, ಪುತ್ತೂರು ತಾಲೂಕಿನ ಚೆನ್ನಾವರ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶಾಂತಕುಮಾರಿ ಎನ್. ಹಾಗೂ ಸುಳ್ಯ ತಾಲೂಕಿನ ಅಚಪ್ಪಾಡಿ ಶಾಲೆಯ ಸಹ ಶಿಕ್ಷಕಿ ಶ್ವೇತಾ ಕೆ.
ಹಿರಿಯ ಪ್ರಾಥಮಿಕ ವಿಭಾಗ
ಬಂಟ್ವಾಳ ತಾಲೂಕಿನ ಕೆದಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಚೇತಾ, ಬೆಳ್ತಂಗಡಿ ತಾಲೂಕು ಬಂಗಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಮಿತಾನಂದ, ಮಂಗಳೂರು ಉತ್ತರದ ಕಾಪಿಕಾಡು ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಪಾವಾನಾ ಕೆ., ಮಂಗಳೂರು ದಕ್ಷಿಣದ ನಾಲ್ಯಪದವು ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಸುರೇಶ್ ರಾವ್, ಮೂಡುಬಿದಿರೆ ಅಳಿಯೂರು ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೀವ್ ಶೆಟ್ಟಿ, ಪುತ್ತೂರು ತಾಲೂಕು ಗೋಳಿತೊಟ್ಟು ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಶೀನಪ್ಪ ನಾಯ್ಕ ಎನ್. ಹಾಗೂ ಸುಳ್ಯ ತಾಲೂಕು ಪೇರಾಲ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಸುನಂದ ಜಿ.
ಪ್ರೌಢಶಾಲಾ ವಿಭಾಗ
ಬಂಟ್ವಾಳ ತಾಲೂಕಿನ ಸಜಿಪ ಮೂಡ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ವೆಂಕಟರಮಣ ಆಚಾರ್ಯ, ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್, ಮಂಗಳೂರು ಉತ್ತರ ನಡುಗೋಡು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸುಂದರ, ಮಂಗಳೂರು ದಕ್ಷಿಣದ ಜೆಪ್ಪು ಕಾಸ್ಸಿಯಾ ಪ್ರೌಢಶಾಲೆಯ ಸಹ ಶಿಕ್ಷಕ ಎವರೆಸ್ಟ್ -ಲಿಕ್ಟ್ ಕ್ರಾಸ್ತಾ, ಮೂಡುಬಿದಿರೆ ಕಲ್ಲಮುಂಕೂರು ಸರ್ವೋದಯ ಪ್ರೌಢಶಾಲೆಯ ಸಹ ಶಿಕ್ಷಕ ಶಂಕರ ನಾಯ್ಕ, ಪುತ್ತೂರು ತಾಲೂಕು ಕೊಂಬೆಟ್ಟು ಸರಕಾರಿ ಪ.ಪೂ.ಕಾಲೇಜಿನ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಎಸ್ ಮತ್ತು ಸುಳ್ಯ ತಾಲೂಕಿನ ಮರ್ಕಂಜ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪ ಪ್ರಶಸ್ತಿಗೆ ಆಯ್ಕೆಯಾದವರು.