ಮುಂದಿನ ವಾರದಿಂದ ದ.ಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಗೆ ಬೀಳಲಿದೆ ಬ್ರೇಕ್!! ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಯವರ ಮುಂದಿನ ನಿರ್ಧಾರವಾದರೂ ಯಾವುದು?

ಮಹಾಮಾರಿಯ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್ ಡೌನ್ ನ್ನು ತೆಗೆದ ಬಳಿಕ, ನೆರೆ ರಾಜ್ಯಗಳಲ್ಲಿ ಹೆಚ್ಚಾದ ಸೋಂಕು ಪ್ರಕರಣಗಳು ಜಿಲ್ಲೆಗೂ ವ್ಯಾಪಿಸುವ ಸಂಭವ ಹೆಚ್ಚಿದ್ದರಿಂದ ಜಿಲ್ಲೆಯಲ್ಲಿ ತುರ್ತು ವೀಕೆಂಡ್ ಕರ್ಫ್ಯೂ ಹೇರಲಾಗಿದ್ದು, ಕಳೆದ ಕೆಲ ವಾರಗಳಲ್ಲಿ ವೀಕೆಂಡ್ ಕರ್ಫ್ಯೂ ಗೆ ಜನರು ಉತ್ತಮ ರೀತಿಯಲ್ಲಿ ಸಹಕರಿಸಿದ್ದರು. ಸದ್ಯ ಸೋಂಕು ಪತ್ತೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮಟ್ಟಕ್ಕೆ ತಲುಪಿದ್ದರಿಂದ ಹಾಗೂ ಜಿಲ್ಲೆಯ ಜನತೆ, ವ್ಯಾಪಾರಸ್ಥರು ಅನುಭವಿಸುತ್ತಿರುವ ಕಷ್ಟಗಳ ಬಗೆಗೆ ಗಮನ ಹರಿಸಿದ ಜಿಲ್ಲಾಡಳಿತ ಮುಂದಿನ ವಾರದಿಂದ ವೀಕೆಂಡ್ ಕರ್ಫ್ಯೂ ತೆಗೆಯುವ ಬಗೆಗೆ ಯೋಚಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯವರು ವರ್ತಕರ ಸಂಘದ ಪ್ರಮುಖರಾದ ಸಂತೋಷ್ ಕಾಮತ್ ಅವರೊಂದಿಗೆ ನಡೆಸಿದ ಮಾತುಕತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರ್ತಕ ಸಂಘದ ಪ್ರಮುಖರಾದ ಸಂತೋಷ್ ಕಾಮತ್

ಕರ್ಫ್ಯೂ ನಿಂದಾಗಿ ವರ್ತಕರು ಅನುಭವಿಸುತ್ತಿರುವ ಕಷ್ಟಗಳ ಬಗೆಗೆ ವರ್ತಕರ ಸಂಘದ ಪ್ರಮುಖರೊಬ್ಬರು ಜಿಲ್ಲಾಧಿಕಾರಿಗಳೊಂದಿಗೆ ಫೋನ್ ಕಾಲ್ ನಲ್ಲಿ ಮಾತನಾಡಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಅದರಲ್ಲಿ ಡಿಸಿ ಯವರು ಇಷ್ಟು ಸಮಯಗಳ ಕಾಲ ಜಿಲ್ಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡಿದೆ, ಇನ್ನೂ ಒಂದುವಾರದ ಮಟ್ಟಿಗೆ ಸಹಿಸಿಕೊಳ್ಳಿ, ಪಾಸಿಟಿವ್ ದರ ಶೇ 2 ಕ್ಕಿಂತ ಕಡಿಮೆ ಬಂದರೆ ಮುಂದಿನ ವಾರದಿಂದ ವಾರಂತ್ಯದ ಕರ್ಫ್ಯೂ ತೆರೆಯುವ ಬಗ್ಗೆ ಸರ್ಕಾರದ ಗಮನಸೆಳೆಯುವ ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದ್ದು, ಇಷ್ಟು ಮಾತ್ರವಲ್ಲದೇ ಯಾವುದೇ ಪ್ರದೇಶದಲ್ಲಿ ವರ್ತಕರು ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿರುವ ಮಾತುಗಳು ಆಡಿಯೋ ದಲ್ಲಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ತುಣುಕು ಜನತೆಯನ್ನು ಗೊಂದಲಕ್ಕೀಡು ಮಾಡಿದೆ.ಹಾಗಾದರೆ ಮುಂದಿನ ವಾರದಿಂದ ವಾರಾಂತ್ಯದ ಕರ್ಫ್ಯೂ ಗೆ ಬ್ರೇಕ್ ಬೀಳಲಿದೆಯೇ? ಜಿಲ್ಲಾಧಿಕಾರಿಯವರು ವರ್ತಕರ ಸಂಘಕ್ಕೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆಯೇ ಎಂಬುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.