ಮದುವೆಯಾಗುತ್ತೇನೆಂದು ಸುರತ್ಕಲ್ ನ ಯುವತಿಯಿಂದ ಹಣ ಪಡೆದುಕೊಂಡ, ತನಗೆ ಬೇಕಾದ ರೀತಿ ಉಪಯೋಗಿಸಿ ಪರಾರಿಯಾದ!!ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಆತನ ಹಿಸ್ಟರಿ ತೆಗೆದಾಗ ಕಾದಿತ್ತು ಶಾಕ್

ಮಂಗಳೂರಿನ ಯುವತಿಯೊಬ್ಬಳನ್ನು ಮದುವೆಯಾಗುತ್ತೇನೆಂದು ನಂಬಿಸಿ ಬಳಸಿಕೊಂಡಿದ್ದಲ್ಲದೇ, ಆಕೆಯಿಂದ ಹಣವನ್ನು ಪಡೆದುಕೊಂಡು ಆ ಬಳಿಕ ನಾಪತ್ತೆಯಾಗಿದ್ದ ಖತರ್ನಾಕ್ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಜಯಪುರ ನಿವಾಸಿ ಜಗನ್ನಾಥ್ ಎಂದು ಗುರುತಿಸಲಾಗಿದೆ.

ಘಟನೆ ವಿವರ :ತಾನು ಸಿವಿಲ್ ಇಂಜಿನಿಯರ್ ಎಂದು ವಧು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪ್ರೊಪೈಲ್ ಒಂದನ್ನು ಹಾಕಿಕೊಂಡಿದ್ದ ಯುವಕ,ಹಲವರು ಯುವತಿಯರಿಗೆ ಮದುವೆ ಪ್ರಸ್ತಾಪ ಕಳಿಸಿ ಅವರ ವಿಶ್ವಾಸ ಗಿಟ್ಟಿಸಿಕೊಂಡು, ತನಗೆ ಬೇಕಾದ ರೀತಿ ಬಳಸಿಕೊಂಡು ಆ ಬಳಿಕ ನಾಪತ್ತೆಯಾಗುತ್ತಿದ್ದ.

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ತಾನು ಉಳ್ಳಾಲದ ನಿವಾಸಿಯೆಂದು ಹೇಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುರತ್ಕಲ್‌ನ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ್ದ.

ನಾನು ಮನೆ ಖರೀದಿಸುತ್ತಿದ್ದೇನೆ,ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಆಕೆಯನ್ನು ನಂಬಿಸಿ 3 ಲಕ್ಷ ರೂ. ಸಾಲ ಪೀಕಿಸಿದ್ದ. ಹೇಗೂ ಮದುವೆ ಆಗುವ ಹುಡುಗ ಎಂದು ಆಕೆ ತನ್ನ ಚಿನ್ನವನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ನೀಡಿದ್ದಳು. ಇದರಲ್ಲಿ ಒಂದೂವರೆ ಲಕ್ಷ ರೂ. ಮರಳಿಸಿದ್ದ ಆತ ಸ್ವಲ್ಪ ದಿನಗಳ ನಂತರ ನಂಬಿಸಿ ಆ ಹಣವನ್ನೂ ಆಕೆಯಿಂದ ವಾಪಸ್ ಪಡೆದಿದ್ದ. ಬಳಿಕ ಜಗನ್ನಾಥ್ ನಾಪತ್ತೆಯಾಗಿದ್ದ. ಭಯಗೊಂಡ ಯುವತಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ, ಈತ ಇದೇ ರೀತಿ ಹಲವು ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಎಂಬುದು ಬಯಲಾಗಿದೆ.

Leave A Reply

Your email address will not be published.