ಅಮೆಜಾನ್‌ನಲ್ಲಿ 8 ಸಾವಿರ ಉದ್ಯೋಗವಕಾಶ | ನೇಮಕಾತಿ ಪ್ರಕಟಣೆ

ಅತೀ ದೊಡ್ಡ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ದೇಶದಾದ್ಯಂತ ಸುಮಾರು 35 ನಗರಗಳಲ್ಲಿ ಎಂಟು ಸಾವಿರ ಜನರನ್ನು ನೇರ ನೇಮಕಾತಿ ಮೂಲಕ ಉದ್ಯೋಗಕ್ಕೆ ಆಯ್ಕೆ ಮಾಡುವುದಾಗಿ ಪ್ರಕಟಿಸಿದೆ.

 

ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆ ನೇಮಕಾತಿ ಮಾಡಲು ಸಂಸ್ಥೆ ನಿರ್ಧರಿಸಿದೆ.

ಕಾರ್ಪೊರೇಟ್, ತಂತ್ರಜ್ಞಾನ, ಗ್ರಾಹಕ ಸೇವಾ ವಿಭಾಗಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ 8 ಸಾವಿರ ಜನರ ನೇಮಕಾತಿ ನಡೆಯಲಿದೆ ಎಂದು ಪ್ರಕಟಿಸಿದೆ.

ಈ ಬಗ್ಗೆ ಸಂಸ್ಥೆ‌ಯ ಎಚ್‌ಆರ್ ದೀಪ್ತಿ ವರ್ಮಾ ಅವರು ಮಾತನಾಡಿ, ಅಹಮದಾಬಾದ್, ಭೋಪಾಲ್, ಕೊಯಮತ್ತೂರ್, ಬೆಂಗಳೂರು, ಹೈದರಾಬಾದ್, ಚೆನ್ನೈ, ಗುರುಂಗಾವ್, ಮುಂಬೈ, ಕೋಲ್ಕತ್ತಾ, ನೋಯ್ಡಾ, ಅಮೃತಸರ, ಜೈಪುರ, ಕಾನ್ಪುರ, ಲೂಧಿಯಾನ ಮೊದಲಾದೆಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ನೇರ ಹಾಗೂ ಪರೋಕ್ಷವಾಗಿ ಅಮೆಜಾನ್ ಈಗಾಗಲೇ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದು, 2025 ರ ವೇಳೆಗೆ ದೇಶದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ‌ಯ ಗುರಿ ಹೊಂದಿರುವುದಾಗಿಯೂ ಅವರು ಹೇಳಿದ್ದಾರೆ.

Leave A Reply

Your email address will not be published.