ಮೂಲ್ಕಿ : ಸಿಮೆಂಟ್ ಪೈಪ್ ಉರುಳಿಬಿದ್ದು ನಾಲ್ಕು ವರ್ಷದ ಬಾಲಕ ಸಾವು

Share the Article

ಮೂಲ್ಕಿ:ಸಿಮೆಂಟ್ ಪೈಪ್ ಉರುಳಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ಮೂಲ್ಕಿಯಲ್ಲಿ ನಡೆದಿದೆ.

ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ನಾಲ್ಕು ವರ್ಷದ ಯುವರಾಜ ಎಂಬ ಬಾಲಕ ಮೃತಪತ್ತಿದ್ದಾರೆ.

ನಾಗರಾಜ್ ಎಂಬುವರ ಕಂಪನಿಯ ಸಿಮೆಂಟ್ ಪೈಪ್‌ಗಳನ್ನು ಲಿಂಗಪ್ಪಯ್ಯಕಾಡಿನ ಆಶ್ರಯ ಕಾಲೊನಿಯ ಬಳಿಯಲ್ಲಿ ದಾಸ್ತಾನು ಇಟ್ಟಿದ್ದರು. ಈ ಸಿಮೆಂಟ್ ಪೈಪ್ ಮಗುವಿನ ಮೇಲೆ ಬಿದ್ದಿದೆ.

ಮುಲ್ಕಿಯ ಲಿಂಗಪ್ಪಯ್ಯ ಕಾಡು ಆಶ್ರಯ ಕಾಲೋನಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ ರಾಮು ಮತ್ತು ಶಾಂತ ಎಂಬವರ ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಯುವರಾಜನು ಮನೆಯ
ಸಮೀಪದಲ್ಲಿ ಸಿಮೆಂಟ್ ಪೈಪ್ ರಾಶಿ ಹಾಕಿದ್ದಲ್ಲಿ ಆಟವಾಡಲು ತೆರಳಿದ್ದ ಎನ್ನಲಾಗಿದೆ.

ಮಗು ಆಟವಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಸಿಮೆಂಟಿನ ಪೈಪ್ ಗಳು ಮಗುವಿನ ಮೇಲೆ ಉರುಳಿ ಬಿದ್ದಿವೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಆಟವಾಡುತ್ತಿದ್ದ ಉಳಿದ ಮಕ್ಕಳು ಬೊಬ್ಬೆ
ಹಾಕಿದ್ದಾರೆ.ಮಕ್ಕಳ ಮನೆಯವರು ಓಡಿಬಂದು ತೀವ್ರ
ಗಾಯಗೊಂಡಿದ್ದ ಯುವರಾಜನನ್ನು ತಕ್ಷಣ ಮೂಲ್ಕಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿದ್ದಾನೆ.ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply