ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರ, ಸಂಚಾರಕ್ಕೆ ತಡೆ|ಸ್ಥಳೀಯರಿಂದ ತೆರವು ಕಾರ್ಯಾಚರಣೆ ಯಶಸ್ವಿ
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ನ ಒಂದನೇ ಹಾಗೂ ಎರಡನೇ ತಿರುವಿನ ಮಧ್ಯೆ ಇಂದು (ಸೆ.2)ಮುಂಜಾನೆ ಬೃಹತ್ ಮರ ರಸ್ತೆಗೆ ಬಿದ್ದು ಸುಮಾರು ಒಂದು ಗಂಟೆಯ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು,ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ.
ಮುಂಜಾನೆ 8.45ರ ವೇಳೆ ಈ ಘಟನೆ ಸಂಭವಿಸಿದ್ದು, ವಿಪರೀತ ಮಳೆ ಹಾಗೂ ಅತೀ ಹೆಚ್ಚಿನ ವಾಹನಗಳು ಮುಂಜಾನೆ ವೇಳೆ ಸಂಚರಿಸುವುದರಿಂದ ಎರಡು ಕಡೆ ರಸ್ತೆ ತಡೆ ಉಂಟಾಯಿತು.
ಕೂಡಲೇ ಚಾರ್ಮಾಡಿ ಹಸನಬ್ಬರವರ ತಂಡ ಹಾಗೂ ಸ್ಥಳೀಯರು,ಅರಣ್ಯ ಇಲಾಖೆ ಸಿಬ್ಬಂದಿಗಳ ಸೂಕ್ತ ಕಾರ್ಯಾಚರಣೆಯಿಂದ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.