ಗ್ರಾಹಕರಿಗೆ ಮತ್ತೊಮ್ಮೆ ಅಡುಗೆ ಅನಿಲ ದರ ಏರಿಕೆಯ ಬಿಸಿ | 25 ರೂ. ಏರಿಕೆ, 15 ದಿನಗಳಲ್ಲಿ ಬರೋಬ್ಬರಿ 50 ರೂ. ಹೆಚ್ಚಳ !?
ಗ್ರಾಹಕರಿಗೆ ಅಡುಗೆ ಅನಿಲ ಬೆಲೆ ಏರಿಕೆಯ ಬಿಸಿ ಮುಟ್ಟಿದ್ದು, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. 15 ದಿನಗಳಲ್ಲಿ ಸಬ್ಸಿಡಿ ರಹಿತ LPG ಸಿಲಿಂಡರ್ 50 ರೂಪಾಯಿಗಳಷ್ಟು ದುಬಾರಿಯಾಗಿದೆ. ಇಂದು ಸಿಲಿಂಡರ್ ದರವನ್ನು ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ.
ಈ ಹಿಂದೆ, ಆಗಸ್ಟ್ 18 ರಂದು ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದವು. ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳದ ನಂತರ, ಈಗ ದೆಹಲಿಯಲ್ಲಿ 4.2 ಕೆಜಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ.ಗೆ ತಲುಪಿದೆ.
ಈ ಮೊದಲು ಜುಲೈ ಮತ್ತು ಆಗಸ್ಟ್‌ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಮೇ ಮತ್ತು ಜೂನ್‌ನಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಏಪ್ರಿಲ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು.
ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈ ವರ್ಷ ಜನವರಿಯಲ್ಲಿ 694 ರೂ. ಇತ್ತು, ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 794 ರೂ. ತಲುಪಿತು. ಮಾರ್ಚ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 819 ರೂ.ಗೆ ಏರಿಸಲಾಯಿತು. ಇದೀಗ ಬೆಲೆ 880 ರೂ. ಗಳ ಗಡಿದಾಟಿದೆ.