ಪೇಟೆಯಲ್ಲಿ ಪಾನಮತ್ತರ ಕಿತಾಪತಿ | ಹೆಣ್ಮಕ್ಕಳಿಗೆ,ಸಾರ್ವಜನಿಕರಿಗೆ ಕಿರಿಕಿರಿ

ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪಾನಪ್ರಿಯರ ಕಿತಾಪತಿಗಳು ಹೆಚ್ಚಾಗುತ್ತಿದ್ದು, ಪೊಲೀಸರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕಾಲೇಜು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂಮೈದಾನದಸ್ಥಳಗಳಲ್ಲಿ ಜನಸಂದಣಿ ಇರುವಲ್ಲಿಹಗಲಿನಲ್ಲೇದುಡಿಯಲು ಶಕ್ತರಿದ್ದರೂ ಪುಟ್‌ ಪಾತ್‌ಗಳಲ್ಲಿ ಅಮಲು ಸೇವಿಸಿ ಬಿದ್ದು ಕೊಂಡಿರುತ್ತಾರೆ. ಕೆಲವರು ಅಮಲು ನಶೆ ಕಾರಣಕ್ಕೆ ಸಾರ್ವಜನಿಕರಿಗೆ, ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದು, ಕಮೆಂಟ್ ಮಾಡುವುದನ್ನೂ ಮಾಡುತ್ತಿದ್ದಾರೆ.

ಅತ್ತಾವರದ ಜನನಿಬಿಡ ಪ್ರದೇಶದಲ್ಲಿ ಪಾನಪ್ರಿಯನೊಬ್ಬ ಸಿಕ್ಕಾಪಟ್ಟೆ ಕುಡಿದು ಮೇಲಕ್ಕೆ ಏಳಲಾಗದೇ ಅತ್ತಾವರ ರಸ್ತೆ ಪಕ್ಕದಲ್ಲೇ ಬಿದ್ದುಕೊಂಡಿದ್ದ. ಸಾರ್ವಜನಿಕರು ಎಚ್ಚರಿಸಿದರೂ ಮತ್ತೆ ಅದೇ ಸ್ಥಳದಲ್ಲೇ ಕುಳಿತು ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: