ಮೇದಿನಡ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆ
ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭವು ಆ.29 ರಂದು ನಡೆಯಿತು.
ನೂತನ ಕಟ್ಟಡವನ್ನು ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲಸಾರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು , ಅಜ್ಜಾವರ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀ ಚನಿಯ ಕಲ್ಲಡ್ಕ,ಕೆ.ಎಫ್.ಡಿ.ಸಿ ಅಧಿಕಾರಿಗಳಾದ ಶ್ರೀ ರಂಗನಾಥ್, ತೋಟಗಳ ಅಧೀಕ್ಷಕ, ಶ್ರೀ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ರಶ್ಮಿ, ಮೇಲ್ವಿಚಾರಕರಾದ ಶ್ರೀಮತಿ ಶೈಲಜಾ, ಅಜ್ಜಾವರ ಗ್ರಾಮ ಪಂಚಾಯಿತ್ ಉಪಾಧ್ಯಕ್ಷೆ, ಶ್ರೀಮತಿ ಲೀಲಾ ಮನೋಮೋಹನ್, ಸದಸ್ಯರುಗಳಾದ, ಶ್ರೀ ರವಿರಾಜ ಕರ್ಲಪಾಡಿ, ಶ್ರೀಮತಿ ದಿವ್ಯ ಪಡ್ಡಂಬೈಲು, ಅಬ್ದುಲ್ಲಾ ಅಜ್ಜಾವರ, ಶ್ವೇತ ಪುರುಷೋತ್ತಮ , ಶ್ರೀಮತಿ ರತ್ನಾವತಿ, ಶ್ರೀಮತಿ ಸರೋಜಿನಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ, ದೀಪಿಕಾ ಮೇದಿನಡ್ಕ, ಹಿರಿಯರಾದ ದಯಾಳ್ ಮೇದಿನಡ್ಕ ವೇದಿಕೆಯಲ್ಲಿದ್ದರು.
ದಯಾಳ್ ಮೇದಿನಡ್ಕ ಸ್ವಾಗತಿಸಿ, ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು, ವಿನೋದ್ ಧನ್ಯವಾದ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನವೀನ್ ರೈ ಮೇನಾಲ, ಹಿರಿಯರಾದ ಆನಂದರಾವ್ ಕಾಂತಮಂಗಲ,ಸುಭೊದ್ ಶೆಟ್ಟಿ ಮೇನಾಲ, ದೇವಸ್ಥಾನದ ಅರ್ಚಕರಾದ ಯೋಗರಾಜ್, ಊರಿನ ಎಲ್ಲ ನಾಗರಿಕರು ಉಪಸ್ಥಿತರಿದ್ದರು.