50 ವರ್ಷಗಳಿಂದ ಒಂದೇ ಒಂದು ಅಪರಾಧಗಳು ನಡೆಯದ ಊರಲ್ಲಿ ಬಿತ್ತು ನಾಲ್ಕು ಹೆಣಗಳು | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ಕು ಸಹೋದರರ ಬರ್ಬರ ಹತ್ಯೆ !

ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ,ಒಂದೇ ಕುಟುಂಬದ ನಾಲ್ವರು ಸಹೋದರ ಬರ್ಬರ ಹತ್ಯೆ ನಡೆದಿರುವ ಘಟನೆ ಬಾಗಲಕೋಟೆ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಕೊಲೆ, ಜಗಳ ಎಂಬುದೇ ಗೊತ್ತೇ ಇಲ್ಲದ ಊರಲ್ಲಿ,ಈಗ ಮೂರು ಎಕರೆ 21 ಗುಂಟೆ ಜಾಗಕ್ಕಾಗಿ ನಡೆದ ಜಗಳದಲ್ಲಿ ಮಲ್ಲಪ್ಪ, ಬಸಪ್ಪ, ಈಶ್ವರ ಹಾಗೂ ಹನಮಂತ ಮೃತ ಪಟ್ಟ ಸಹೋದರರಾಗಿದ್ದಾರೆ.

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಕೃತ್ಯವನ್ನು ನಡೆಸಿದ್ದು,ಈ ವೇಳೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಮೃತರ ಸಹೋದರರನ್ನು ಹೀಗೆ ಒಬ್ಬರ ಹಿಂದೆ ಒಬ್ಬರಂತೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

Ad Widget
Ad Widget

Ad Widget

Ad Widget

ಪ್ರಕರಣಕ್ಕೆ ಸಂಬಂಧಿಸಿ 9 ಆರೋಪಿಗಳನ್ನು ಬಾಗಲಕೋಟೆ ಜಮಖಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ 12 ಜನರ ಹೆಸರು ಕೇಳಿಬಂದಿದೆ.

ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ 12 ಮಂದಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

50 ವರ್ಷಗಳಿಂದ ಒಂದೇ ಒಂದು ಕೊಲೆ ಕಾಣದ ಊರಲ್ಲಿ ಈಗ ನಾಲ್ವರು ಹೆಣವಾಗಿದ್ದಾರೆ. 1972 ರಲ್ಲಿ ಗ್ರಾಮದಲ್ಲಿ ಗಲಾಟೆ ನಡೆದು ಇಬ್ಬರ ಕೊಲೆ ಆಗಿತ್ತು. ಅದನ್ನು ಬಿಟ್ಟರೆ ಅಪರಾಧ ಪ್ರಕರಣವಾಗಲೀ, ಕೊಲೆಯೆಂಬುದು ಈ ಊರಲ್ಲಿ ನಡೆದಿರಲಿಲ್ಲ.ಆದರೆ ಇದೀಗ ಆಸ್ತಿಗಾಗಿ ಇಂಥ ಕೃತ್ಯ ನಡೆದಿದೆ ಎಂದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

‘ಕಲೆ, ಸಾಹಿತ್ಯ, ಧಾರ್ಮಿಕತೆಯಲ್ಲಿ ಹೆಸರುವಾಸಿ ಆಗಿರುವ ಗ್ರಾಮ ನಮ್ಮದು. ಇತ್ತೀಚಿಗಷ್ಟೆ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ರಸ್ತೆಗಾಗಿ ಗ್ರಾಮದ ಅನೇಕರು ಸ್ವಯಂ ಸ್ಫೂರ್ತಿಯಿಂದ,ತಮ್ಮ ಮನೆಗಳನ್ನು ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದರು.

ಬೇರೆ ಮನೆಯಿಲ್ಲದ ಬಡವರು ಸಹ ದೇವಸ್ಥಾನಕ್ಕಾಗಿ ಇದ್ದ ಒಂದು ಮನೆಯನ್ನೇ ದಾನ ಮಾಡಿದ್ದರು. ಅಂಥ ದೈವಿಭಕ್ತಿಯಿರುವ ಗ್ರಾಮನಮ್ಮದು. ಇಂಥ ಗ್ರಾಮದಲ್ಲಿ ಇದೀಗ ಜಮೀನು ವಿವಾದ ನಾಲ್ಕು ಜನರ ಕೊಲೆಗೆ ಕಾರಣವಾಗಿದೆ. ಇದು ತಮ್ಮೂರಿಗೆ ಕೆಟ್ಟ ಹೆಸರು ತಂದಿದೆ ಎಂದು ಗ್ರಾಮದ ಹಿರಿಕ ಉಮೇಶ ಸಿದರಡ್ಡಿ ದುಃಖಿತರಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: