ಮಂಗಳೂರು: ಅಕ್ರಮ ಮರಳು ಸಾಗಾಟ | ಮರಳು ಸಹಿತ ಲಾರಿ ವಶ

Share the Article

ಮಂಗಳೂರು : ಕೊಣಾಜೆ ಗ್ರಾಮದ ಗಣೇಶ್ ಮಹಲ್ ಬಳಿ ಕೊಣಾಜೆ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಕೊಣಾಜೆಯಿಂದ ದೇರಳಕಟ್ಟೆ ಕಡೆಗೆ ಸಂಚರಿಸುತ್ತಿದ್ದ ಮರಳು ತುಂಬಿದ ಲಾರಿಯ ಚಾಲಕ ಪೊಲೀಸರನ್ನು ಕಂಡು ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಕುರಿತು ದೊರೆತ ಮಾಹಿತಿಯಂತೆ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದು, ಚಾಲಕ ಸಂದೀಪ್ ವಿರುದ್ಧ ದೂರು ದಾಖಲಿಸಲಾಗಿದೆ.

Leave A Reply