ಮಂಗಳೂರು | ಎರಡು ಭಿನ್ನಕೋಮಿನ ಯುವಕರ ತಂಡಗಳ ನಡುವೆ ನಡುರಸ್ತೆಯಲ್ಲೇ ಜಗಳ, ಮಧ್ಯಪ್ರವೇಶಿಸಿದ ಪೊಲೀಸರಿಂದ ಲಾಠಿ ಪ್ರಹಾರ

ಎರಡು ಭಿನ್ನ ಕೋಮಿನ ತಂಡಗಳ ನಡುವೆ ನಡು ರಸ್ತೆಯಲ್ಲಿಯೇ ಜಗಳ ನಡೆದು, ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದ ಘಟನೆ ನಿನ್ನೆ ಸಂಜೆ ಮಂಗಳೂರು ನಗರದ ಕಾವೂರು ಜಂಕ್ಷನ್ ಬಳಿ ನಡೆದಿದೆ.

ನಿನ್ನೆ ಸಂಜೆ ಸಂಚರಿಸುತ್ತಿದ್ದ ಸ್ಕೂಟರೊಂದಕ್ಕೆ
ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಸ್ಕೂಟರಿನಲ್ಲಿದ್ದ ಹಿಂದೂ ಸಂಘಟನೆಯ ಯುವಕರು ಕಾರು ಚಾಲಕನ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ಈ ವಿಚಾರಕ್ಕೆ ಇತ್ತಂಡಗಳ ನಡುವೆ ವಾಗ್ವಾದ ಆರಂಭವಾಗಿದೆ. ಸ್ವಲ್ಪ ಸಮಯದಲ್ಲೇ ಎರಡೂ ಕಡೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಎರಡೂ ಗುಂಪುಗಳ ಯುವಕರು ಹೊಡೆದಾಡುವ ಹಂತಕ್ಕೆ ಬಂದಾಗ, ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿ ಪ್ರಹಾರವಾಗುತ್ತಲೇ ಸೇರಿದ್ದ ಯುವಕರೆಲ್ಲಾ ಚದುರಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಪೊಲೀಸರ ಸಕಾಲಿಕ ಕ್ರಮದಿಂದಾಗಿ ಭಿನ್ನ ಕೋಮುಗಳ ಯುವಕರ ನಡುವೆ ನಡೆಯಲಿದ್ದ ಬೀದಿ ಕಾಳಗ ತಪ್ಪಿದಂತಾಗಿದೆ.

Leave a Reply

error: Content is protected !!
Scroll to Top
%d bloggers like this: