ಪತ್ನಿಯೊಂದಿಗೆ ಯಾವಾಗ ಬೇಕಾದರೂ ಸೇರಬಹುದು | ಹೀಗೊಂದು ಆದೇಶ ನೀಡಿದೆ ಕೋರ್ಟ್ !!

Share the Article

ಛತ್ತೀಸ್ ಗಡ: ಗಂಡಂದಿರು ಇನ್ನು ಮುಂದೆ ಫುಲ್ಲು ರಿಲಾಕ್ಸ್. ಅವರು ಪತ್ನಿಯರನ್ನು ಯಾವಾಗ ಬೇಕಾದರೂ ಮುಟ್ಟಬಹುದು, ಪ್ರೀತಿಗೆ ಆಹ್ವಾನಿಸಬಹುದು ಮತ್ತು ತಮಗಿಷ್ಟದ ರೀತಿಯಲ್ಲಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು. ಆಫ್ ಕೋರ್ಸ್, ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋಯಿಸದೆ ಇಂಟರ್ ಕೋರ್ಸ್ ನಡೆಸಬಹುದು !!

ಇಂತಹದೊಂದು ತೀರ್ಪನ್ನು ಇದೀಗ ಕೋರ್ಟು ನೀಡಿದ್ದು, ಗಂಡಂದಿರ ಮೇಲೆ ವಿನಾಕಾರಣ ನಡೆಯುತ್ತಿದ್ದ ದೂರುಗಳು ಇನ್ನು ಮುಂದೆ ಕಮ್ಮಿ ಆಗುವ ನಿರೀಕ್ಷೆ ಮೂಡಿದೆ.
ಗಂಡನು ಪತ್ನಿಯ ಮೇಲೆ ನಡೆಸುವ ಒಪ್ಪಿಗೆ ಇರುವ ಅಥವಾ ಒಪ್ಪಿಗೆ ಇಲ್ಲದೇ ಇರುವ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂದು ಛತ್ತೀಸ್ಥಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ತೀರ್ಪು ನೀಡಿರುವ ನ್ಯಾಯಮೂರ್ತಿ ಎನ್.ಕೆ. ಚಂದ್ರವಂಶಿ ಅವರು ಅಪ್ರಾಪ್ತ ವಯಸ್ಕ ಅಲ್ಲದ ಸ್ವಂತ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ಮಹಿಳೆಯೊಬ್ಬಳು, ಸಂಭೋಗದ ವೇಳೆ ಪತಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು ಎಂದು ಆರೋಪಿಸಿ ಪೊಲೀಸ್ ಗೆ ದೂರು ನೀಡಿದ್ದಳು.

ಆಗ ಪತಿ ವಿರುದ್ಧ ಸೆಕ್ಷನ್ 376(ಅತ್ಯಾಚಾರ) ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ತೀರ್ಪು ಈಗ ಗಂಡನ ಪರ ತೀರ್ಪು ನೀಡಿದೆ. ಮದುವೆ ಆಗುವುದು ಮುಖ್ಯವಾಗಿ ಸೆಕ್ಸ್ ಬಯಕೆ ತೀರಿಸಿಕೊಳ್ಳಲು ಎಂದು ಕೋರ್ಟು ಪರಿಗಣಿಸಿ ಈ ತೀರ್ಪು ನೀಡಲಾಗಿದೆ.

Leave A Reply