ತನ್ನ ಮನೆಗೆ ಟಿವಿ ನೋಡಲು ಬಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಇಳಿವಯಸ್ಸಿನ ಮುದುಕ!! ಕಟೀಲು ಪೆರ್ಮುದೆಯಲ್ಲಿ ನಡೆದ ಘಟನೆ, ಮಹಿಳಾ ಠಾಣೆ ಪೊಲೀಸರಿಂದ ಆರೋಪಿಯ ಬಂಧನ

ಮನೆಯಲ್ಲಿ ಟಿವಿ ನೋಡಲು ಬಂದಿದ್ದ ಅಪ್ರಾಪ್ತ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ವೃದ್ಧನೊಬ್ಬನನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದು, ಬಂಧಿತನನ್ನು ಕಟೀಲು ಪೆರ್ಮುದೆ ನಿವಾಸಿ ರಾಮಕೃಷ್ಣ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಆರೋಪಿಯ ಮನೆಯಲ್ಲಿ ಹೊರ ಜಿಲ್ಲೆಯ ಮಹಿಳೆ ಹಾಗೂ ಮಹಿಳೆಯ ಮಕ್ಕಳು ಬಾಡಿಗೆಗೆ ವಾಸವಿದ್ದು, ಘಟನೆ ನಡೆದ ದಿನ ಮಹಿಳೆ ತನ್ನ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಅದೇ ದಿನ ಸಂಜೆ ಹೊತ್ತಿಗೆ ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ತೆರಳಿದ್ದು, ಆರೋಪಿಯ ಹೆಂಡತಿ ಇಬ್ಬರೂ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದು,ಆಗ ಮನೆಯಲ್ಲಿ ಈಕೆ ಒಬ್ಬಳೇ ಇದ್ದದನ್ನು ಕಂಡ ವೃದ್ಧ ಆಕೆಯನ್ನು ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ.

ಆರೋಪಿ ಮರುದಿನ ಕೂಡಾ ಬಾಲಕಿಯೊಂದಿಗೆ ಇದೇ ಚಾಳಿ ಮುಂದುವರಿಸಿದ್ದು, ತನ್ನ ತಾಯಿ ಮನೆಗೆ ಬಂದ ಕೂಡಲೇ ಆ ಬಾಲಕಿ ನಡೆದ ವಿಚಾರವನ್ನು ತಾಯಿಗೆ ತಿಳಿಸಿದ್ದಾಳೆ.

Ad Widget / / Ad Widget

ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

error: Content is protected !!
Scroll to Top
%d bloggers like this: