ಪುತ್ತೂರು: ಸೂತ್ರಬೆಟ್ಟಿನ 6 ಮನೆಗಳಿಗೆ ಸಂಪರ್ಕ ರಸ್ತೆ ಸಮಸ್ಯೆ | ಸ್ಥಳಕ್ಕೆ ಬೇಟಿ ಕೊಟ್ಟ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ | ಸಮಸ್ಯೆ ಪರಿಹರಿಸುವ ಭರವಸೆ

ಪುತ್ತೂರು: ನಗರ ಸಭಾ ವ್ಯಾಪ್ತಿಯ ಸೂತ್ರಬೆಟ್ಟು ಪರಿಸರದ 6 ಮನೆಗಳಿಗೆ ರಸ್ತೆಯ ವ್ಯವಸ್ಥೆ ಇಲ್ಲದೆ ಇರುವ ಸಣ್ಣ ದಾರಿಯೂ ಗುಂಡಿ ಕೆಸರಿನಿಂದ ತುಂಬಿದ್ದು ನಡೆದು ಹೋಗಲು ಸಾಧ್ಯವಾಗದಷ್ಟು ಹದಗೆಟ್ಟಿದೆ.

ಇಲ್ಲಿಯ ಮನೆಗಳಿಗೆ ಗ್ಯಾಸ್ ಹಾಗೂ ಇತರೆ ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೋಗುವ ಪರಿಸ್ಥಿತಿ ಎದುರಾಗಿದೆ.

Ad Widget
Ad Widget

Ad Widget

Ad Widget

ಅದಲ್ಲದೆ ದಾರಿಯಲ್ಲಿ ಒಂದು ದೊಡ್ಡದಾದ ಕೆರೆ ಇದ್ದು ಅದಕ್ಕೆ ಯಾವುದೇ ತಡೆ ಗೋಡೆಯು ಇಲ್ಲಾ ಕೆರೆಯ ಹೂಳು ಎತ್ತದೆ 20 ವರ್ಷಗಳೇ ಕಳೆದಿದೆ ಮಳೆ ಬಂದರೆ ನೀರು ತುಂಬಿ ರಸ್ತೆಗೆ ಬಂದರೆ ಇರುವ ಚಿಕ್ಕ ರಸ್ತೆಯು ಮುಚ್ಚಲಪಡುತ್ತದೆ ಇನ್ನೂ ಈ ಕಡೆಯಿಂದ ವಿದ್ಯಾರ್ಥಿಗಳು ಇದ್ದು ಕೆರೆಯು ಅಪಾಯಕಾರಿಯಾಗಿದೆ.

ಹಲವು ವರ್ಷಗಳಿಂದ ಈಡೇರದ ಬೇಡಿಕೆ :
ಇನ್ನೂ ಇಲ್ಲಿಯ ಮನೆಯವರು ಹಾಗೂ ಈ ರಸ್ತೆಯನ್ನು ಉಪಯೋಗಿಸುವ ಇತರೆ ಊರಿನ ಜನರು ಹಲವು ಬಾರಿ ರಸ್ತೆ ವ್ಯವಸ್ಥೆ ಸರಿಪಡಿಸಲು ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನಗಳು ಇಲ್ಲಿಯವರೆಗೆ ಆಗಿಲ್ಲ.

ಮೊದಲ ಬಾರಿಗೆ ಭೇಟಿ ನೀಡಿದ ನಗರ ಸಭಾ ಅಧ್ಯಕ್ಷ
ಇಲ್ಲಿಯ ನಿವಾಸಿಗಳು ಪ್ರಸ್ತುತ ನಗರಸಭಾ ಅಧ್ಯಕ್ಷರಾಗಿರುವ ಜೀವಂಧರ್ ಜೈನ್ ಅವರಿಗೆ ರಸ್ತೆ ಬಗ್ಗೆ ಮನವಿ ಮಾಡಿದ್ದು, ಕೂಡಲೇ ಅವರು ಸ್ಥಳಕ್ಕೆ ಇಲ್ಲಿನ ನಗರ ಸಭಾ ಸದಸ್ಯ ಪ್ರೇಮ್ ಕುಮಾರ್ ಅವರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇಲ್ಲಿಯ ಜನರ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ರಸ್ತೆ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಮತ್ತು ಕೆರೆ ಯನ್ನು ಅಭಿವೃದ್ದಿ ಪಡಿಸಲು ಸಂಬಂಧ ಪಟ್ಟ ಇಲಾಖೆಯೊಂದಿಗೆ ಮಾತನಾಡಿ ಅಭಿವೃದ್ಧಿ ಪಡಿಸುವ ಆಶ್ವಾಸನೆ ನೀಡಿದ್ದಾರೆ.

ಮತ್ತೆ ಭರವಸೆ ಭರವಸೆಯಾಗಿಯೇ ಉಳಿಯುವುದೇ..?
ನಗರಸಭಾ ಅಧ್ಯಕ್ಷರ ಭೇಟಿ ಹಾಗೂ ನೀಡಿದ ಭರವಸೆಗಳಿಂದ ಇಲ್ಲಿಯ ಜನರು ರಸ್ತೆ ವ್ಯವಸ್ಥೆಯಾಗುವ ನಿರೀಕ್ಷೆಯಲ್ಲಿದ್ದಾರೆ ಈ ಭರವಸೆ ಭರವಸೆಯಾಗಿಯೇ ಉಳಿಯದೆ ಇಲ್ಲಿನ ಜನರಿಗೆ ರಸ್ತೆ ವ್ಯವಸ್ಥೆ ಶೀಘ್ರವಾಗಲಿ ಎಂಬುದೇ ಎಲ್ಲರ ಆಶಯ..

Leave a Reply

error: Content is protected !!
Scroll to Top
%d bloggers like this: