ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಕಾರ್ಯ ಆರಂಭ
ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಕಾರ್ಯ ಅ. 31ರ ವರೆಗೆ ನಡೆಯಲಿದೆ. ನ. 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ನ. 1ರಿಂದ 30ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಡಿ. 20ರಂದು ನಡೆಯಲಿದ್ದು, 2022ರ ಜ. 5ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ.
ನೋಂದಣಾಧಿಕಾರಿಗಳು :
ಬೆಳ್ತಂಗಡಿ, ಪುತ್ತೂರು, ಸುಳ್ಯ ಕ್ಷೇತ್ರ: ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ (ಮೊ.: 94823 26262)
ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಗಳ ನೋಂದಣಾಧಿಕಾರಿ: ಸಹಾಯಕ ಆಯುಕ್ತ ಮದನಮೋಹನ್ (ಮೊ: 99723 56999)
ಸಹಾಯಕ ನೋಂದಣಾಧಿಕಾರಿಗಳು:
ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳ ಸಹಾಯಕ ನೋಂದಣಾಧಿಕಾರಿಗಳು: ತಹಶೀಲ್ದಾರ್‌ಗಳಾದ ಮಹೇಶ್ ಜೆ. (ಮೊ.: 99024 34583) / ಅನಿತಾ ಲಕ್ಷ್ಮೀ (ಮೊ. ಸಂ. 70429 76487) ಮತ್ತು ರಮೇಶ್ ಬಾಬು (ಮೊ: 94801 68864)
ಮೂಡುಬಿದಿರೆ, ಮಂಗಳೂರು ನಗರ ಉತ್ತರ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ: ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್ (ಮೊ: 98452 85151)
ಮಂಗಳೂರು ನಗರ ದಕ್ಷಿಣ ಕ್ಷೇತ್ರ: ಮನಪಾ ಕಂದಾಯ ಅಧಿಕಾರಿ ವಿಜಯ ಕುಮಾರ್ (ಮೊ: 94481 77302)
ಬಂಟ್ವಾಳ: ತಹಶೀಲ್ದಾರ್ ರಶ್ಮೀ (ಮೊ: 99720 61514)
ಅಗತ್ಯ ದಾಖಲೆಗಳು :
ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳು, ವಯಸ್ಸಿನ ದಾಖಲೆಗಳು (2022ರ ಜ. 1ರ ಅರ್ಹತಾ ದಿನಾಂಕದಂತೆ 18 ವರ್ಷವಾಗಿರಬೇಕು), ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಎಸೆಸೆಲ್ಸಿ ಅಥವಾ ಪಿಯುಸಿ ಅಂಕಪಟ್ಟಿ, ಪಾನ್‌ಕಾರ್ಡ್ ಇತ್ಯಾದಿ.
ವಾಸಸ್ಥಳದ ಬಗ್ಗೆ ದಾಖಲೆಗಳು ಪಡಿತರ ಚೀಟಿ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಬಾಡಿಗೆ ಕರಾರು ಪತ್ರ ಇತ್ಯಾದಿ.
ಅರ್ಜಿ ನಮೂನೆಗಳ ವಿವರ :
ಹೆಸರು ಸೇರ್ಪಡೆಗೆ ನಮೂನೆ-6, ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ನಮೂನೆ 6 ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ಪಟ್ಟಿಯಲ್ಲಿರುವ ದೋಷಗಳ ತಿದ್ದುಪಡಿಗೆ ನಮೂನೆ-8 ಹಾಗೂ ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಸಲ್ಲಿಸಬೇಕಿರುವ ಅರ್ಜಿ ನಮೂನೆ 8-ಎ ಆಗಿದೆ ಎಂದು ಪ್ರಕಟನೆ ತಿಳಿಸಿದೆ.
ಲೋಪದೋಷಗಳ ಪರಿಶೀಲನೆಗೆ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಥವಾ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು
ವೆಬ್ ಪೋರ್ಟಲ್: www.ceokarnataka.kar.nic.in, www.nvsp.in ಮತ್ತು www.dk.nic.in ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.ಸಹಾಯವಾಣಿ: 1950