ಉಪ್ಪಿನಂಗಡಿ: ಮಧ್ಯರಾತ್ರಿ ಹಿಂದೂ ಯುವಕನ ಮೀನು ಮಾರುಕಟ್ಟೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು|ಸಂಪೂರ್ಣ ಸುಟ್ಟು ಕರಕಲಾದ ಅಂಗಡಿ, ಸ್ಥಳಕ್ಕೆ ಪೊಲೀಸರ ಭೇಟಿ

ಕಳೆದ ಮಧ್ಯರಾತ್ರಿ ಉಪ್ಪಿನಂಗಡಿಯ ಮೀನು ಮಾರುಕಟ್ಟೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ (ಹಳೆಗೇಟು) ಸುಬ್ರಹ್ಮಣ್ಯ ಕ್ರಾಸ್ ನಲ್ಲಿ ಇರುವ ಅಶೋಕ್ ಶೆಟ್ಟಿ ಎಂಬವರಿಗೆ ಸೇರಿದ ಮೀನು ಮಾರುಕಟ್ಟೆಗೆ ಕಿಡಿಗೇಡಿಗಳು ನಿನ್ನೆ ತಡರಾತ್ರಿ ಬೆಂಕಿ ಹಚ್ಚಿದ್ದು, ಸದ್ಯ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕೂಡಲೇ ಬೆಂಕಿ ನಂದಿಸುವ ಕಾರ್ಯ ಮಾಡಿದರೂ, ಪ್ರಯೋಜನವಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಕೆಲ ಅನ್ಯ ಮತೀಯರ ವಿರುದ್ಧ ಆರೋಪ ಕೇಳಿ ಬಂದಿದ್ದು,ಈ ಮಧ್ಯೆ ಹಿಂದೂ ಯುವಕನ ಮೀನಿನ ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿರುವ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲೂ ಮುಂದಾಗಿವೆ ಎಂಬ ಮಾಹಿತಿಯೂ ಕೆಲ ಮೂಲಗಳಿಂದ ಲಭಿಸಿದೆ.ಶೀಘ್ರದಲ್ಲೇ ಆರೋಪಿಗಳ ಬಂಧನದ ಸಾಧ್ಯತೆ ಹೆಚ್ಚಿದ್ದು, ಕೆಲ ನಾಯಕರು ಪೊಲೀಸರ ಮೇಲೆ ಆರೋಪಿಗಳ ಬಂಧನಕ್ಕೆ ಒತ್ತಡ ಹೇರಿರುವ ಬಗ್ಗೆಯೂ ಗುಮಾನಿ ಇದೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: