ಅಫ್ಘಾನಿಸ್ತಾನದಿಂದ ಪ್ರಾಣ ಉಳಿಸಿಕೊಳ್ಳಲು ಅಮೇರಿಕಾದ ವಿಮಾನ ಹತ್ತಿದ ತುಂಬು ಗರ್ಭಿಣಿ |ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿ, ತನ್ನೊಳಗಿನ ಜೀವಕ್ಕೆ ಪಾಪಿಗಳ ನೆರಳು ಬೀಳಲಿಲ್ಲ ಎಂದು ನಿಟ್ಟುಸಿರು ಬಿಟ್ಟ ಮಹಾ ತಾಯಿ !

ಅಫ್ಘಾನಿಸ್ತಾನದ ನರಕ ಯಾತನೆಗೆ ಬೇಸತ್ತು ಎಲ್ಲಾ ಪ್ರಜೆಗಳು ಬೇರೆ ದೇಶಕ್ಕೆ ಹೋಗಿ ತಮ್ಮ ಪ್ರಾಣ ರಕ್ಷಣೆಗೆ ಒದ್ದಾಡುತ್ತಿದ್ದಾರೆ. ಇಂತಹ ಭೀಕರ ದೃಶ್ಯದಿಂದ ಎಲ್ಲರ ಕಣ್ ತಂಪಾದ ಘಟನೆ ಇದರ ನಡುವೆಯೇ ನಡೆದಿದ್ದು, ಅಮೆರಿಕ ಮಿಲಿಟರಿ ವಿಮಾನ ಹತ್ತಿದ ಅಫ್ಘಾನ್ ಮಹಿಳೆ ಒಬ್ಬರು ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.

ಅಮೆರಿಕ ತನ್ನ ನಾಗರೀಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ಮಿಲಿಟರಿ ವಿಮಾನದಲ್ಲಿ ಅಫ್ಘಾನಿಸ್ತಾನದ ತುಂಬು ಗರ್ಭಿಣಿ ಹತ್ತಿದ್ದಾಳೆ. ಮಧ್ಯ ಪ್ರಾಚ್ಯದಿಂದ ಅಮೆರಿಕ ಮಿಲಿಟರಿ ವಿಮಾನ ಹಾರಾಟ ಆರಂಭಿಸಿದ ಕೆಲ ಹೊತ್ತಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಎತ್ತರದಲ್ಲಿವಿಮಾನ ಹಾರುತ್ತಿರುವ ಕಾರಣದಿಂದ ಮಹಿಳೆಗೆ ತೀವ್ರ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿದೆ. ಇದನ್ನು ಅರಿತ ಅಮೆರಿಕ ಮಿಲಿಟರಿ ವಿಮಾನ ಪೈಲೆಟ್, ಎತ್ತರದ ಮಟ್ಟವನ್ನು ತಗ್ಗಿಸಿದ್ದಾರೆ. ವಿಮಾನವನ್ನು ಮತ್ತಷ್ಟು ಕೆಳಗಿಳಿಸಿದ್ದಾರೆ. ಈ ಮೂಲಕ ವಿಮಾನದೊಳಗೆ ಗಾಳಿ ಒತ್ತಡ ಹೆಚ್ಚಿಸಲಾಯಿತು. ಇದು ತಾಯಿಯ ಉಸಿರಾಟ ಹಾಗೂ ಆಕೆಯನ್ನು ಪ್ರಾಣಾಪಾಯದಿಂದ ರಕ್ಷಿಸಲು ನೆರವಾಯಿತು.

Ad Widget
Ad Widget

Ad Widget

Ad Widget

ಈ ಪರಿಸ್ಥಿತಿ ಕಷ್ಟಕರವಾದ ಕಾರಣ ಪೈಲೆಟ್ ವಿಮಾನವನ್ನು, ಜರ್ಮನಿಯಲ್ಲಿರುವ ಅಮೆರಿಕಾ ಏರ್ ಬೇಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ತಕ್ಷಣವೇ ಅಮೆರಿಕ ಮಿಲಿಟರಿ ವೈದ್ಯಕೀಯ ಸಿಬ್ಬಂದಿಗಳು ಗರ್ಭಿಣಿ ಮಹಿಳೆಗೆ ನೆರವಿಗೆ ಧಾವಿಸಿದ್ದು,ವಿಮಾನದಲ್ಲಿ ತಾಯಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು ಯುಎಸ್ ಮಿಲಿಟರಿ ಏರ್‌ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಅಮೆರಿಕ ವಿಲಿಟರಿ ಹೇಳಿದೆ.

ಉಗ್ರರ ಗುಂಡೇಟಿನ ಘೋರ ಸಾವಿಗಿಂತ ಇತರ ಯಾವುದೇ ದೇಶದ ಜೈಲಲ್ಲಾದರೂ ಬದುಕುತ್ತೇವೆ ಅನ್ನೋ ಪರಿಸ್ಥಿತಿಯ ನಡುವೆ ಈಕೆ ಮಗುವಿಗೆ ಜನ್ಮ ನೀಡುವ ಮೂಲಕ ಎರಡು ಜೀವ ಉಳಿದಂತಾಗಿದೆ.

Leave a Reply

error: Content is protected !!
Scroll to Top
%d bloggers like this: