ಕಿಡ್ನಿ ಖರೀದಿಸುವ ನೆಪದಲ್ಲಿ ಮಹಿಳೆಗೆ 8 ಲಕ್ಷ ವಂಚನೆ | ಪೊಲೀಸರಿಗೆ ದೂರು

ಬೆಂಗಳೂರು : ಕಿಡ್ನಿ ಖರೀದಿಸುವ ಸೋಗಿನಲ್ಲಿ ತನಗೆ ಸುಮಾರು 7.97 ಲಕ್ಷ ರೂ. ವಂಚಿಸಲಾಗಿದೆ ಎಂದು ವೈಯಾಲಿಕಾವಲ್‌ನ 36ರ ಹರೆಯದ ಮಹಿಳೆ ಕೇಂದ್ರ ವಿಭಾಗ ಸಿಇಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮಹಿಳೆ, ತನ್ನನ್ನು ಡಾ| ಸೀಮಾ ರೈ ಎಂದು ಪರಿಚಯಿಸಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವ ಭರವಸೆ ನೀಡಿದ್ದರು.

ಅನಂತರ ನೋಂದಣಿ ಶುಲ್ಕ, ರಕ್ತ ಪರೀಕ್ಷೆ, ಆರ್‌ಬಿಐ ಮಾರ್ಗಸೂಚಿ ಶುಲ್ಕವೆಂದು ಮಹಿಳೆಯಿಂದ 7.97 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Leave A Reply

Your email address will not be published.