ಪುತ್ತೂರು : ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಅಮ್ಚಿನಡ್ಕದ ಯುವಕನಿಗೆ 6.5 ಲಕ್ಷ ವಂಚನೆ

Share the Article

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದುಕೊಂಡು ನಂಬಿಕೆ ದ್ರೋಹ, ವಂಚನೆ ಎಸಗಿರುವ ಘಟನೆ ಮಾಡ್ನೂರು ಗ್ರಾಮದ ಅಮ್ಚಿನಡ್ಕದಲ್ಲಿ ನಡೆದಿದೆ.

ವಂಚನೆಗೊಳಗಾದ ಮಹಮ್ಮದ್ ಸಾದಿಕ್ ಅವರು ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ವಂಚಿಸಿದ ಆರೋಪಿಯನ್ನು ಎಲ್ವಿಸ್ ಕನ್ಸನ್ ಟೈನ್ ಬರೆಟ್ಟೋ ಎಂದು ಗುರುತಿಸಲಾಗಿದೆ.ಈತ ಕೆನಡಾದಲ್ಲಿ ಉದ್ಯೋಗವನ್ನು ಒದಗಿಸಿಕೊಡುವುದಾಗಿ ಸಾದಿಕ್ ಅವರಿಗೆ ಭರವಸೆಯನ್ನು ನೀಡಿ ಪಾಸ್ ಪೋರ್ಟ್ ಮತ್ತು 6,50,000 ರೂ. ಹಣವನ್ನು ಪಡೆದುಕೊಂಡು ವಿದೇಶದಲ್ಲಿ ಉದ್ಯೋಗವನ್ನು ಮಾಡಿಕೊಡದೇ ಪಡೆದುಕೊಂಡ ಹಣ ಹಾಗೂ ಪಾಸ್ ಪೋರ್ಟ್ ಅನ್ನು ಹಿಂತಿರುಗಿಸದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವುದಾಗಿ ಸಾಧಿಕ್ ಆರೋಪಿ ಎಲ್ವಿಸ್ ವಿರುದ್ಧ ದೂರು ನೀಡಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ. ಕ್ರ 75/2021 ಕಲಂ 406,420,465,468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply