ಗ್ರಾಹಕರಿಗೆ ಶಾಕ್ ನೀಡಿದ ಪೆಟ್ರೋಲಿಯಂ ಕಂಪನಿಗಳು | ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆ ಏರಿಕೆ

ಪೆಟ್ರೋಲಿಯಂ ಕಂಪನಿಗಳು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದೆ.

ಬೆಲೆ ಏರಿಕೆ ನಂತರ ದೆಹಲಿಯಲ್ಲಿ ಗೃಹ ಬಳಕೆಯ 14.2 ಕೆಜಿಯ ಎಲ್‍ಪಿಜಿ ಸಿಲಿಂಡರ್ ಬೆಲೆ 859.5 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 886 ರೂ. ಮುಂಬೈನಲ್ಲಿ 859.5 ರೂ. ಲಕ್ನೋದಲ್ಲಿ 897.5 ರೂ.ಗೆ ತಲುಪಿದೆ. ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ ಬೆಲೆ 68 ರೂ.ನಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಒಂದು ಸಿಲಿಂಡರ್ ಬೆಲೆ 1,618 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 14.2 ಕೆಜಿಯ ಎಲ್‍ಪಿಜಿ ಸಿಲಿಂಡರ್ ಬೆಲೆ 837.50 ರೂ.ಗಳಿಂದ 863 ರೂ.ಗೆ ತಲುಪಲಿದೆ ಎಂದು ವರದಿಯಾಗಿದೆ.

ತೈಲ ಕಂಪನಿಗಳು ಪ್ರತಿ ತಿಂಗಳು ಮೊದಲ ಮತ್ತು 15ನೇ ತಾರೀಖಿನಂದು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ದರವನ್ನು ಪರಿಶೀಲಿಸುತ್ತವೆ. ಇದಕ್ಕೂ ಮೊದಲು ಜುಲೈ 1ರಂದು ತೈಲ ಕಂಪನಿಗಳು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ.ನಷ್ಟು ಹೆಚ್ಚಿಸಿದ್ದವು.

Ad Widget


Ad Widget


Ad Widget

Ad Widget


Ad Widget

ಈಗ ಆಗಸ್ಟ್ 15ರ ನಂತರ ಮತ್ತೆ ಎಲ್ ಪಿಜಿ ಬೆಲೆಯು 25 ರೂ. ಹೆಚ್ಚಾಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: