ಕುಂಬ್ರ ಸಮೀಪ ಅಪಘಾತ : ಗಾಯಾಳು ಸರ್ವೆಯ ಯುವಕ ಮೃತ್ಯು

ಪುತ್ತೂರು: ಪುತ್ತೂರು ತಾಲೂಕು ಆರಿಯಡ್ಕ ಗ್ರಾಮದ ಕೊಲ್ಲಾಜೆ ಎಂಬಲ್ಲಿ ಆ.8 ರಂದು ನಡೆದ ಅಪಘಾತದಿಂದ ಗಂಭೀರ ಗಾಯಗೊಂಡ ಸರ್ವೆಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

 

ಕುಂಬ್ರ ಕಡೆಯಿಂದ ತಿಂಗಳಾಡಿ ಕಡೆಗೆ ತನ್ನ ಜುಪಿಟರ್‌ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೀದಿ ನಾಯಿಯೊಂದು ರಸ್ತೆಗೆ ಏಕಾಏಕಿ ಅಡ್ಡ ಬಂದಾಗ ಸ್ಕೂಟರ್ ಸವಾರ ಸರ್ವೆ ಗ್ರಾಮದ ಪರನೀರು ನಿವಾಸಿ ಪ್ರಶಾಂತ್ ಅವರು ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿದ್ದು, ಪ್ರಶಾಂತ್‌ ಅವರನ್ನು ಅಂಬ್ಯುಲೆನ್ಸ್‌ ನಲ್ಲಿ ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ನಡೆಸಿ, ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಆ.18ರಂದು ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ.

Leave A Reply

Your email address will not be published.